Thursday, June 4, 2026
Homeಕರಾವಳಿಉಡುಪಿಮನೆ ಬಿಟ್ಟು ಬಂದ ಅಪ್ರಾಪ್ತ ಬಾಲಕಿಯರು; ಇಬ್ಬರು ಬಾಲಕಿಯರ ರಕ್ಷಣೆ

ಮನೆ ಬಿಟ್ಟು ಬಂದ ಅಪ್ರಾಪ್ತ ಬಾಲಕಿಯರು; ಇಬ್ಬರು ಬಾಲಕಿಯರ ರಕ್ಷಣೆ

- Advertisement -
- Advertisement -

ಮಲ್ಪೆ: ಇಲ್ಲಿಯ ಬೀಚಿನಲ್ಲಿ ಅ.18 ಶುಕ್ರವಾರದಂದು ಮನೆಬಿಟ್ಟು ಬಂದಂತಹ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಶುಕ್ರವಾರದಂದು ರಕ್ಷಿಸಿದ ಘಟನೆ ನಡೆದಿದೆ.

ರಕ್ಷಿಸಲ್ಪಟ್ಟಿರುವ ಮಕ್ಕಳು ಹಾವೇರಿಯವರಾಗಿದ್ದು, ಅವರಿಗೆ ವಿದ್ಯಾಭ್ಯಾಸ ಮುಂದುವರಿಸುವ ಆಸಕ್ತಿಯಿದ್ದು, ಪೋಷಕರಿಲ್ಲದೆ ಅಸಹಾಯಕರಾದ ಬಗ್ಗೆ ತಿಳಿಸಿದ್ದಾರೆ. ಹಾಗೆಯೇ ಶಿಕ್ಷಣ ಪಡೆಯುವ ಉದ್ದೇಶದಿಂದ ಹಣ ಕ್ರೋಢೀಕರಿಸುವ ಸಲುವಾಗಿ ಹಾವೇರಿಯಿಂದ ಉಡುಪಿಗೆ ಭಿಕ್ಷೆಯಾಚಿಸಲು ಬಂದಿರುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ.

ಇವರಿಬ್ಬರು ಮಲ್ಪೆ ಬೀಚ್‌ ನಲ್ಲಿ ವಿಹರಿಸುತ್ತಿದ್ದು, ಬಾಲಕಿಯರ ಚಲನವಲನದಲ್ಲಿ ಸಂಶಯಗೊಂಡು ಬೀಚ್ ಗಸ್ತು ಸಿಬ್ಬಂದಿ ಸುರೇಶ್ ಅಂಚನ್ ಮತ್ತು ಸುಬ್ರಮಣ್ಯ ಅವರು ವಿಚಾರಿಸಿದ್ದು, ಈ ವೇಳೆಯಲ್ಲಿ ಬಾಲಕಿಯರು ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ. ತಕ್ಷಣ ಅವರು ಅಪ್ರಾಪ್ತ ಬಾಲಕಿಯರ ರಕ್ಷಣೆಗೈಯಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಒಳಕಾಡುವರು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ರಕ್ಷಣಾ ಘಟಕಕ್ಕೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಹಿಳಾ ಪೋಲಿಸ್ ಠಾಣೆಯ ಪಿ.ಎಸ್.ಐ ಪ್ರೇಮನ್ ಗೌಡ ಪಾಟೀಲ್, ಪೇದೆ ಮಹದೇವ್ ಅವರೊಂದಿಗೆ ಬೀಚ್‌ ಗೆ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ. ತರುವಾಯ ಕಲ್ಯಾಣ ಸಮಿತಿಯ ಆದೇಶದಂತೆ ರಕ್ಷಿಸಲ್ಪಟ್ಟ ಅಪ್ರಾಪ್ತ ಮಕ್ಕಳನ್ನು ನಿಟ್ಟೂರಿನ ಬಾಲಕಿಯರ ಬಾಲಭವನದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಈ ಸಂದರ್ಭ ಮಕ್ಕಳ ರಕ್ಷಣಾ ಘಟಕದ ಮಹೇಶ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!