Thursday, June 4, 2026
Homeತಾಜಾ ಸುದ್ದಿಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ: ವಿಷ ಸೇವಿಸಿ ಬಾಲಕಿ ಆತ್ಮಹತ್ಯೆಗೆ ಶರಣು

ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿ: ವಿಷ ಸೇವಿಸಿ ಬಾಲಕಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಕೊಟ್ಟಿಗೆಹಾರ : ಬಿಜೆಪಿ ಕಾರ್ಯಕರ್ತನ ಕಿರುಕುಳಕ್ಕೆ ಅಪ್ರಾಪ್ತ ಬಾಲಕಿ ಬಲಿಯಾದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

ಬಜರಂಗದಳ ಸಂಸೆ ಘಟಕದ ಸಂಯೋಜಕನಾಗಿದ್ದ ನಿತೇಶ್ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ವಂಚಿಸಿದ್ದಕ್ಕೆ ನೊಂದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳಸ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ 17 ವರ್ಷದ ದೀಪ್ತಿ ಮೃತ ದುರ್ದೈವಿ. ಜ.10ರಂದು ಮನೆಯಲ್ಲಿದ್ದ ಕಳೆ ನಾಶಕ ಸೇವಿಸಿದ್ದ ದೀಪ್ತಿ  ಜ.14ರಂದು ಮಂಗಳೂರಿನ ಏ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಸಾಯುವ ಕೊನೆಯ ಕ್ಷಣದಲ್ಲಿ ಡೆತ್ ನೋಟ್ ಬರೆದಿಟ್ಟು ಬಾಲಕಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಆದ್ರೆ ಆರೋಪಿ ಹಿತೇಶ್ (25) ವಿರುದ್ಧ ದೂರು ದಾಖಲಿಸದೇ ಕುದುರೆ ಮುಖ ಪೊಲೀಸರು ಸತಾಯಿಸಿದ್ದಾರೆ ಎನ್ನಲಾಗಿದೆ. ಪೋಷಕರ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಕುದುರೆಮುಖ ಪೊಲೀಸರಿಗೆ ಎಸ್ಪಿ ತರಾಟೆಗೆ ತೆಗೆದುಕೊಂಡಿದ್ದಾರೆ.ಎಸ್.ಪಿ ಸೂಚನೆ ಬಳಿಕ ಆರೋಪಿ ಹಿತೇಶ್ ವಿರುದ್ಧ ದೂರು ಸ್ವೀಕರಿಸಲಾಗಿದೆ. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಿತೇಶ್ ನನ್ನು ಭಜರಂಗದಳದ ಸಂಘನೆಯಿಂದ ಹೊರ ಹಾಕಲಾಗಿದೆ.  

- Advertisement -

Latest News

error: Content is protected !!