Thursday, June 4, 2026
Homeಕರಾವಳಿಮಂಗಳೂರು: 35ಕ್ಕೂ ಅಧಿಕ ಕಳ್ಳತನ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಅರೆಸ್ಟ್‌ 

ಮಂಗಳೂರು: 35ಕ್ಕೂ ಅಧಿಕ ಕಳ್ಳತನ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಅರೆಸ್ಟ್‌ 

- Advertisement -
- Advertisement -
ಮಂಗಳೂರು: ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 35ಕ್ಕೂ ಅಧಿಕ ಕಳ್ಳತನ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕು ಪಡಂಗಡಿ-ಮದ್ದಡ್ಕ ನಿವಾಸಿ ಕುಂಞಿಮೋನು ಯಾನೆ ಜಾಫರ್‌ ಯಾನೆ ಹಮೀದ್ (48) ಬಂಧಿತ ಆರೋಪಿ. ಆರೋಪಿಯು ಕದ್ದ  9 ಲಕ್ಷ ರೂ ಹಣವನ್ನು ಮಣ್ಣಿನ‌ಡಿ ಹೂತು ಹಾಕಿ ತಲೆಮರೆಸಿಕೊಂಡಿದ್ದ. ಜೆಸಿಬಿಯಿಂದ ನೆಲ ಅಗೆಯುವಾಗ ಜೆಸಿಬಿ ಚಾಲಕನಿಗೆ ದುಡ್ಡಿನ ಗಂಟು ಸಿಕ್ಕಿತ್ತು. ಬಳಿಕ ತಪಾಸಣೆ ನಡೆಸಿ ೫.೮೦ ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!