Saturday, June 6, 2026
Homeತಾಜಾ ಸುದ್ದಿಕೊರೊನಾ ಲಸಿಕೆ ಹಾಕಿಸಿದ ಎರಡೇ ದಿನದಲ್ಲಿ ಬಿಜೆಪಿ ಸಚಿವರಿಗೆ ಕೋವಿಡ್ ಪಾಸಿಟಿವ್

ಕೊರೊನಾ ಲಸಿಕೆ ಹಾಕಿಸಿದ ಎರಡೇ ದಿನದಲ್ಲಿ ಬಿಜೆಪಿ ಸಚಿವರಿಗೆ ಕೋವಿಡ್ ಪಾಸಿಟಿವ್

- Advertisement -
- Advertisement -

ಅಹಮದಾಬಾದ್‌: ಈಗ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಬಹುತೇಕ ಗಣ್ಯರು, ವಿವಿಧ ಕ್ಷೇತ್ರಗಳ ಮುಖಂಡರು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

ಇನ್ನು  ಕೊರೊನಾ ಲಸಿಕೆ ಹಾಕಿಸಿಕೊಂಡ ಗುಜರಾತ್ ಸಚಿವ ಬಿಜೆಪಿಯ ಈಶ್ವರ್ ಸಿನ್ಹಾ ಪಟೇಲ್ ಅವರಿಗೆ ಮರುದಿನ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ.  ಇವರಿಗೆ ಲಸಿಕೆ ಹಾಕುವ ಪೂರ್ವದಲ್ಲಿ ಪರೀಕ್ಷೆ ಮಾಡಲಾಗಿತ್ತೇ, ಇಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮಾರನೆಯ ದಿನ ಕೋವಿಡ್‌ ವೈರಸ್‌ ಇರುವುದು ತಿಳಿದುಬಂದಿದೆ.

ಈ ಕುರಿತು ಖುದ್ದಾಗಿ ಪಟೇಲ್‌ ಅವರು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಈಶ್ವರ್ ಸಿನ್ಹಾ ಕಳೆದ ಮಾರ್ಚ್ 13ರ ಶನಿವಾರ ಇವರು ಕರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಸೋಮವಾರ ವೈದ್ಯಕೀಯ ತಪಾಸಣೆಯಲ್ಲಿ ನಡೆಸಲಾಗಿದ್ದು, ತಮಗೆ ಕೊವಿಡ್-19 ಸೋಂಕು ತಗುಲಿರುವುದು ಮಂಗಳವಾರ ಹೊರಬಂದ ವರದಿಯಲ್ಲಿ ಸ್ಪಷ್ಟವಾಗಿದೆ ಎಂದಿದ್ದಾರೆ.

ಇಂದು ನನಗೆ ನಡೆಸಿದ ಕರೊನಾ ಪರೀಕ್ಷೆಯಲ್ಲಿ ಸಕಾರಾತ್ಮಕ ವರದಿ ಬಂದಿದ್ದು, ನಾನು ಆರೋಗ್ಯವಂತನಾಗಿದ್ದೇನೆ. ಮುನ್ನೆಚ್ಚರಿಕೆ ಕ್ರಮವಾಗಿ ನನ್ನ ಜತೆಗೆ ಸಂಪರ್ಕದಲ್ಲಿದ್ದ ಎಲ್ಲರೂ ಒಮ್ಮೆ ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!