Thursday, June 4, 2026
Homeತಾಜಾ ಸುದ್ದಿವಿಧಾನಸಭೆ ಅಧಿವೇಶನದ ವೇಳೆ ಕ್ಯಾಂಟೀನ್ ಕಿಚನ್ ನಲ್ಲಿ ಸ್ವತಃ ಕಾಫಿ ತಯಾರಿಸಿ ಕುಡಿದ ಸಚಿವ!

ವಿಧಾನಸಭೆ ಅಧಿವೇಶನದ ವೇಳೆ ಕ್ಯಾಂಟೀನ್ ಕಿಚನ್ ನಲ್ಲಿ ಸ್ವತಃ ಕಾಫಿ ತಯಾರಿಸಿ ಕುಡಿದ ಸಚಿವ!

- Advertisement -
- Advertisement -

ಬೆಳಗಾವಿ: ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಸ್ವತಃ ತಾವೇ ಕಾಫಿ ತಯಾರಿಸಿಕೊಂಡು ಸೇವಿಸಿ ಸರಳತೆ ಮೆರೆದಿದ್ದಾರೆ.

ಆಡಳಿತ ಪಕ್ಷದ ಮೊಗಸಾಲೆಯಲ್ಲಿರುವ ಕ್ಯಾಂಟೀನ್ ನಲ್ಲಿ ಕಿಚನ್ ಗೆ ಹೋಗಿ ಸಚಿವ ಕೃಷ್ಣ ಬೈರೇಗೌಡ ಸ್ವತಃ ತಾವೇ ಕಾಫಿ ತಯಾರಿಸಿ‌ಕೊಂಡು ಕುಡಿದಿದ್ದಾರೆ‌.

ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಒಬ್ಬರೇ ಮೆಟ್ರೋ ರೈಲಿನಲ್ಲಿ ಸಂಚರಿಸಿ ಕೃಷ್ಣ ಬೈರೇಗೌಡ ಸುದ್ದಿಯಾಗಿದ್ದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದಿನಿಂದ ಹತ್ತು ದಿನಗಳ ಕಾಲದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ.

- Advertisement -

Latest News

error: Content is protected !!