Sunday, June 7, 2026
Homeಕರಾವಳಿಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಸಾವು ಪ್ರಕರಣ:ಸ್ಥಳಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ...

ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಸಾವು ಪ್ರಕರಣ:ಸ್ಥಳಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

- Advertisement -
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರದಲ್ಲಿ ನಿನ್ನೆ ಬೆಳಗ್ಗೆ ಮನೆ ಮೇಲೆ ಗುಡ್ಡ ಕುಸಿದ ಮಹಿಳೆ ಮೃತಪಟ್ಟ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ.

ಗುಡ್ಡ ಕುಸಿದ ಸ್ಥಳದಲ್ಲಿ ಪರಿಶೀಲನೆ ನಡೆಸಿದ ದಿನೇಶ್ ಗುಂಡೂರಾವ್ ಸಂತ್ರಸ್ಥ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ದುರಂತದಲ್ಲಿ ಗಾಯಾಳುವಾಗಿರುವ ಪುತ್ರಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಘಟನೆ ನಡೆದ ಸ್ಥಳದಲ್ಲಿ‌ ಇನ್ನೂ ಹಲವಾರು ಮನೆಗಳು ಅಪಾಯದಲ್ಲಿರುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ ಗುಡ್ಡ ಕುಸಿದ ಪರಿಣಾಮ ಮನೆಯೊಳಗೆ ಸಿಲುಕಿದ್ದ ತಾಯಿ ಝರೀನಾ(46) ಸಾವನ್ನಪ್ಪಿದ್ದರೆ,
ಪುತ್ರಿ ಶಫಾ(20) ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು.

- Advertisement -

Latest News

error: Content is protected !!