Sunday, May 19, 2024
Homeಕರಾವಳಿಸುಳ್ಯ: ಪ್ರತೀ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳ ನೆಡುತೋಪು; ಸಚಿವ ಅಂಗಾರ ಹೇಳಿಕೆ

ಸುಳ್ಯ: ಪ್ರತೀ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳ ನೆಡುತೋಪು; ಸಚಿವ ಅಂಗಾರ ಹೇಳಿಕೆ

spot_img
- Advertisement -
- Advertisement -

ಸುಳ್ಯ: ಮನುಷ್ಯ ಆಸೆಗೆ ಬಲಿಯಾಗಿ ಕಾಡಿನಲ್ಲಿದ್ದ ಫಲವತ್ತಾದ ಗಿಡಗಳನ್ನು ಬುಡ ಸಮೇತ ಕಡಿದ ಪರಿಣಾಮ ಪ್ರಾಣಿಗಳಿಗೆ ಆಹಾರವಿಲ್ಲದೆ ನಾಡಿಗೆ ಬರುತ್ತಿದೆ. ಇದರಿಂದ ಈಗ ಸಮಸ್ಯೆ ಆಗುತ್ತಿರು ವುದು ಜನರಿಗೇ. ಆದ್ದರಿಂದ ಅರಣ್ಯ ಇಲಾಖೆ ಮೂಲಕ ತಾಲೂಕಿನ ಪ್ರತೀ ಗ್ರಾಮ ಪಂಚಾ ಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳ ನೆಡುತೋಪು ಮಾಡಲು ಈ ಬಾರಿ ಆರಂಭಿಸಲಾಗಿದೆ. ಆಯಾ ಗ್ರಾಮಸ್ಥರು ಇಲಾಖೆ ಯೊಂದಿಗೆ ಕೈ ಜೋಡಿಸಿ
ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್‌. ಅಂಗಾರ ಹೇಳಿದರು.


ರಂದು ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ಉಪವಿಭಾಗದ, ಗ್ರಾ.ಪಂ.ಅಜ್ಜಾವರ ಹಾಗೂ ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಅಜ್ಜಾವರದ ಪಡ್ಡಂಬೈಲು ಅರಣ್ಯ ಪ್ರದೇಶದಲ್ಲಿ ನಡೆದ ತಾಲೂಕು ಮಟ್ಟದ ಬಿತ್ತೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿ ಮಾತನಾಡಿದರು.
“ಪ್ರಾಣಿಗಳಿಗೆ ಹಿಂದೆ ಕಾಡಿನಲ್ಲಿ ಯಥೇಚ್ಛವಾಗಿ ಆಹಾರ ಸಿಗುತ್ತಿತ್ತು. ಕರಿಮೆಣಸು,ಹಲಸು ಸಹಿತ ಇತರ ಆಹಾರ ಇದ್ದವು. ಇಂದು ಏನಾಗಿದೆ ಎಂದು ಎಲ್ಲರೂ ಅವಲೋಕನ ಮಾಡಿಕೊಳ್ಳಬೇಕು. ಹೀಗೆ ಮುಂದುವರಿದರೆ ತುಂಬಾ ಅಪಾಯ ಇದೆ. ಆದ್ದರಿಂದ ಅರಣ್ಯ ಪ್ರದೇಶದಲ್ಲಿರುವ ಮ್ಯಾಂಜಿಯಮ್, ಅಕೇಶಿಯ, ಗಾಳಿ ಗಿಡಗಳನ್ನು ಕಡಿದು ಅಲ್ಲಿ ಹಣ್ಣಿನ ಗಿಡಗಳ ನೆಡುತೋಪು ಮಾಡುತ್ತೇವೆ” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ವೈ.ಕೆ.”ಕಾಡಿನಲ್ಲಿ ಆಹಾರ ಇಲ್ಲದೆ ಪ್ರಾಣಿಗಳು ನಾಡಿಗೆ ಬರುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು.ಈ ಬಾರಿ ಸರಕಾರ ವಿಶೇಷವಾಗಿ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ನೆಟ್ಟು ಆಹಾರ ಸಿಗುವಂತ ಯೋಜನೆ ಹಾಕಿದೆ. ಇದಕ್ಕೆ ಎಲ್ಲರೂ ನಮ್ಮೊಡನೆ ಕೈ ಜೋಡಿಸ ಬೇಕು ಎಂದು ಹೇಳಿದರು.
ಅಜ್ಞಾವರ ಗ್ರಾ.ಪಂ.ಅಧ್ಯಕ್ಷೆ ಸತ್ಯವತಿ ಬಸವನ ಪಾದೆ, ಉಪಾಧ್ಯಕ್ಷೆ ಲೀಲಾ ಮಮಮೋಹನ, ಸುಳ್ಯ ಎ.ಸಿ.ಎಫ್.ಪ್ರವೀಣ್ ಕುಮಾರ್ ಶೆಟ್ಟಿ, ಆಯುರ್ವೇದ ಕಾಲೇಜು ಉಪನ್ಯಾಸಕ ಪ್ರಮೋದ್, ಅಜ್ಜಾವರ ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ಅಜ್ಜಾವರ,ಅಜ್ಜಾವರ ಧನಲಕ್ಷ್ಮಿ ಮಹಿಳಾ ಮಂಡಲ ಅಧ್ಯಕ್ಷೆ ಶಶ್ಮಿಭಟ್, ಪಂಜ ರೇಂಜರ್ ಮಂಜುನಾಥ್ ಎನ್,ಸುಬ್ರಹ್ಮಣ್ಯ ರೇಂಜರ್ ರಾಘವೇಂದ್ರ, ಅಜ್ಜಾವರ ಪ್ರೌಢಶಾಲಾ ಮುಖ್ಯಗುರು ಗೋಪಿನಾಥ್ ಮೆತ್ತಡ್ಕ ವೇದಿಕೆ ಯಲ್ಲಿದ್ದರು.ಸುಳ್ಯರೇಂಜರ್ ಗಿರೀಶ್ ‘ಆರ್ ಸ್ವಾಗತಿಸಿದರು.ಫಾರೆಸ್ಟರ್ ಶ್ರೀಮತಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!