Monday, May 13, 2024
Homeತಾಜಾ ಸುದ್ದಿವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜಯ: ಗೆಲುವಿನ ಮೂಲಕ ಬಸವರಾಜ ಹೊರಟ್ಟಿ ದಾಖಲೆ

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜಯ: ಗೆಲುವಿನ ಮೂಲಕ ಬಸವರಾಜ ಹೊರಟ್ಟಿ ದಾಖಲೆ

spot_img
- Advertisement -
- Advertisement -

ಬೆಳಗಾವಿ: ವಿಧಾನ ಪರಿಷತ್ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಭಾಪತಿ ಬಸವರಾಜ‌ ಹೊರಟ್ಟಿ ದಾಖಲೆಯ ಗೆಲುವು ಸಾಧಿಸಿದ್ದಾರೆ.

ಸತತ ಎಂಟನೇ ಬಾರಿಗೆ ಗೆಲ್ಲುವ ಮೂಲಕ ಹೊರಟ್ಟಿ ದೇಶದಲ್ಲೇ ಅಪೂರ್ವ ದಾಖಲೆ ಮಾಡಿದ್ದಾರೆ. ಒಟ್ಟು ಚಲಾವಣೆಗೊಂಡ 15,583 ಮತಗಳ ಪೈಕಿ ಬಸವರಾಜ ಹೊರಟ್ಟಿ 9266 ಮತಗಳನ್ನು ಪಡೆದಿದ್ದು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವು ಕಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದರೆ, ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗುಡದಿನ್ನಿ 273 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಚ್ಚರಿ ಎಂದರೆ ಶಿಕ್ಷಕರ ಕ್ಷೇತ್ರದಲ್ಲೇ 1223 ಮತಗಳು ತಿರಸ್ಕೃತಗೊಂಡಿವೆ.

ಇಂದಿನ ಗೆಲುವಿನ ಮೂಲಕ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ನಲ್ಲಿ ದೇಶದಲ್ಲೇ ಅತೀ ಹೆಚ್ಚು ಬಾರಿ ಗೆದ್ದ ದಾಖಲೆ ಮಾಡಿದ್ದಾರೆ. ಇನ್ನೊಂದೆಡೆ ಹೊರಟ್ಟಿ ಗೆಲುವಿನ ಮೂಲಕ ಮೊದಲ ಬಾರಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಪಡೆದಿದೆ.

- Advertisement -
spot_img

Latest News

error: Content is protected !!