Sunday, May 19, 2024
Homeಅಪರಾಧ55 ಮಂದಿ ಕೂಲಿ ಕಾರ್ಮಿಕರನ್ನು ಬಂಧನದಲ್ಲಿಟ್ಟು ದುಡಿಸಿದ ದುಷ್ಕರ್ಮಿ:  ಪೊಲೀಸರಿಂದ ಕಾರ್ಮಿಕರ ರಕ್ಷಣೆ

55 ಮಂದಿ ಕೂಲಿ ಕಾರ್ಮಿಕರನ್ನು ಬಂಧನದಲ್ಲಿಟ್ಟು ದುಡಿಸಿದ ದುಷ್ಕರ್ಮಿ:  ಪೊಲೀಸರಿಂದ ಕಾರ್ಮಿಕರ ರಕ್ಷಣೆ

spot_img
- Advertisement -
- Advertisement -

ಹಾಸನ: ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ಕೂಡಿ ಹಾಕಿ ಕ್ರೌರ್ಯ ಮೆರೆದ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಷ್ಟೇನಹಳ್ಳಿಯಲ್ಲಿ ನಡೆದಿದೆ.


ವ್ಯಕ್ತಿಯೊಬ್ಬ 55 ಜನ ಕಾರ್ಮಿಕರನ್ನು ಒಂದೆಡೆ ಬಂಧನದಲ್ಲಿಟ್ಟಿದ್ದ. ಅಕ್ರಮವಾಗಿ ಬಂಧನದಲ್ಲಿಟ್ಟು ಬಲವಂತದಿಂದ ದುಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ದಾಳಿ ನಡೆಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು, ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.


ಕಾರ್ಮಿಕರು ಕೂಲಿ ಅರಸಿ ಹೊರ ಜಿಲ್ಲೆಗಳಿಂದ ಬಂದಿದ್ದರು. ಪೊಲೀಸರು 50 ಪುರುಷರು, 10 ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ.ಮುನೇಶ್ ಶುಂಠಿ ಎಂಬಾತ ಕೆಲಸಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ. ಕೆಲಸ ಮುಗಿದ ಕೂಡಲೇ ಶೆಡ್‌ನಲ್ಲಿ ಕೂಡಿ ಹಾಕುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.


ತಲೆ ಮರೆಸಿಕೊಂಡಿರುವ ಆರೋಪಿ ಮುನೇಶ್ ಎಂಬಾತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಎಸ್‌ಪಿ ಶ್ರೀನಿವಾಸ್‌ಗೌಡ ಸೂಚನೆ ಮೇರೆಗೆ ದಾಳಿ ನಡೆಸಿದ ಡಿವೈಎಸ್ಪಿ ಅಶೋಕ್, ಸರ್ಕಲ್ ಇನ್ಸ್ಪೆಕ್ಟರ್ ವಸಂತ್‌ಕುಮಾರ್, ಸಬ್‌ಇನ್ಸ್‌ಪೆಕ್ಟರ್ ಲಕ್ಷಣ್ ನೇತೃತ್ವದ ತಂಡ ಕಾರ್ಮಿಕರನ್ನು ಬಂಧನ ಮುಕ್ತಗೊಳಿಸಿದ್ದಾರೆ.

- Advertisement -
spot_img

Latest News

error: Content is protected !!