Friday, June 5, 2026
Homeಕರಾವಳಿಉಡುಪಿಮರುವಾಯಿ ಹೆಕ್ಕಲು ಹೋಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಮರುವಾಯಿ ಹೆಕ್ಕಲು ಹೋಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

- Advertisement -
- Advertisement -

ಉಡುಪಿ : ಪಾಪನಾಶಿನಿ ಹೊಳೆಯಲ್ಲಿ ಕಪ್ಪೆಚಿಪ್ಪು(ಮರುವಾಯಿ) ಹೆಕ್ಕಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ನಡೆದಿದೆ.

ಮೃತರನ್ನು 41 ವರ್ಷದ ಆಸ್ಟೀನ್ ಮಚಾದೋ ಎಂದು ಗುರುತಿಸಲಾಗಿದೆ. ನಾಟಕ, ಚಿತ್ರ ಕಲಾವಿದರಾಗಿದ್ದ ಮಚಾದೋ ಪೈಂಟಿಂಗ್ ವೃತ್ತಿ ಮಾಡಿಕೊಂಡಿದ್ದು, ಕಪ್ಪೆಚಿಪ್ಪು ಹಿಡಿಯಲೆಂದು ಮನೆಯಿಂದ ಉದ್ಯಾವರ ಗ್ರಾಮದ ಪಾಪನಾಶಿನಿ ಹೊಳೆಗೆ ಹೋಗಿದ್ದರು.

ತನ್ನ ಸ್ಕೂಟರನ್ನು ಹೊಳೆ ಬದಿಯಲ್ಲಿ ನಿಲ್ಲಿಸಿ ಹೊಳೆಗೆ ಇಳಿದಿದ್ದು, ವಾಪಾಸು ಮನೆಗೆ ಬಾರದೇ ಇದ್ದ ವೇಳೆ ಮನೆಯವರು ಹುಡುಕಾಟ ನಡೆಸಿದ್ದಾರೆ. ಹೊಳೆಯ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ,

ಬಳಿಕ ಉದ್ಯಾವರ ಗ್ರಾಮದ ಸಂಪಿಗೆನಗರ ಬಬ್ಬರ್ಯಗುಡ್ಡೆಯ ಪಾಪನಾಶಿನಿ ಹೊಳೆಯಲ್ಲಿ ಆಸ್ಟೀನ್ ಮಚಾದೋ ಮೃತದೇಹ ಪತ್ತೆಯಾಗಿದೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಹೊರಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!