Saturday, June 6, 2026
Homeಕರಾವಳಿಉಡುಪಿಉಡುಪಿ: ತಲೆನೋವು ತಡೆಯಲಾರದೆ ನೇಣಿಗೆ ಶರಣಾದ ಯುವಕ

ಉಡುಪಿ: ತಲೆನೋವು ತಡೆಯಲಾರದೆ ನೇಣಿಗೆ ಶರಣಾದ ಯುವಕ

- Advertisement -
- Advertisement -

ಉಡುಪಿ: ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ ಯುವಕನೋರ್ವ ಗೇರು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಮೂಡುಕೆದೂರು ಎಂಬಲ್ಲಿ ನಡೆದಿದೆ.


ಕೆದೂರು ನಿವಾಸಿ ಪ್ರವೀಣ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ.

ಈತ ಕುಂದಾಪುರದ ಅರವಿಂದ ಮೋಟಾರ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು. ಕಳೆದ 10 ತಿಂಗಳಿನಿಂದ ತಲೆ ನೋವಿನಿಂದ ಬಳಲುತ್ತಿದ್ದನು. ತಲೆನೋವಿನಿಂದ ರಾತ್ರಿ ಸರಿಯಾಗಿ ಮಲಗುತ್ತಿರಲಿಲ್ಲ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ.


ಇದೇ ಕಾರಣದಿಂದ ಮನನೊಂದು ಮೂಡು ಕೆದೂರು ರೈಲ್ವೆ ಬ್ರಿಡ್ಜ್ ಬಳಿಯ ಗೇರು ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!