Thursday, April 25, 2024
Homeತಾಜಾ ಸುದ್ದಿನಾಡಹಬ್ಬದಲ್ಲಿ ಮಾದರಿ ಸ್ತಬ್ಧ ಚಿತ್ರ- ಮೆಚ್ಚುಗೆ ಪಡೆದ ಕೊರೊನಾ ಯೋಧರ ಸೇವೆಯ ಸ್ಮರಣೆ!..

ನಾಡಹಬ್ಬದಲ್ಲಿ ಮಾದರಿ ಸ್ತಬ್ಧ ಚಿತ್ರ- ಮೆಚ್ಚುಗೆ ಪಡೆದ ಕೊರೊನಾ ಯೋಧರ ಸೇವೆಯ ಸ್ಮರಣೆ!..

spot_img
- Advertisement -
- Advertisement -

ಮೈಸೂರು: ಈ ವರ್ಷದ ದಸರಾ ಉತ್ಸವದ ಜಂಬೂಸವಾರಿ ಇನ್ನೇನು ಆರಂಭವಾಗಲಿದ್ದು ಈ ಹಿಂದೆ ಪ್ರಮುಖ ಆಕರ್ಷಣೆಯಾಗಿದ್ದ ಸ್ತಬ್ಧ ಚಿತ್ರಗಳ ಸಂಖ್ಯೆ 2ಕ್ಕೆ ಇಳಿಕೆ ಕಂಡಿದೆ. ಕೊರೊನಾ ಭೀತಿಯ ಹಿನ್ನೆಲೆ ಈ ವರ್ಷ ಕೇವಲ ಎರಡು ಸ್ತಬ್ಧ ಚಿತ್ರಗಳಿಗೆ ಅವಕಾಶ ನೀಡಲಾಗಿದೆ.
ಮೈಸೂರು ಜಿಲ್ಲಾ ಪಂಚಾಯತಿ ವತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ರೂಪುಗೊಂಡಿದ್ದು, ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೊರೊನಾ ಯೋಧರ ಸೇವೆ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿದೆ.

ಇದೀಗ ಈ ಚಿತ್ರ ಸಾಕಷ್ಟು ಜನಮನ್ನಣೆ ಪಡೆದುಕೊಂಡಿದೆ.ಇದರ ಜೊತೆಗೆ ಆನೆ ಬಂಡಿ ಸ್ತಬ್ಧಚಿತ್ರವು ಇದ್ದು ಸುಂದರವಾಗಿ ಮೂಡಿದೆ. ಸರಳ ದಸರಾ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆ ಆವರಣಕ್ಕೆ ಜಂಬೂಸವಾರಿ ಮೆರವಣಿಗೆ ಸೀಮಿತಗೊಂಡಿದ್ದು, 30-40 ನಿಮಿಷಗಳ ಅವಧಿಯಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ.

- Advertisement -
spot_img

Latest News

error: Content is protected !!