Thursday, April 18, 2024
Homeತಾಜಾ ಸುದ್ದಿಚಿರಂಜೀವಿ ಸರ್ಜಾಗಾಗಿ ಹೆಸರು ಬದಲಾಯಿಸಿಕೊಂಡ ನಟಿ ಮೇಘನಾ ರಾಜ್

ಚಿರಂಜೀವಿ ಸರ್ಜಾಗಾಗಿ ಹೆಸರು ಬದಲಾಯಿಸಿಕೊಂಡ ನಟಿ ಮೇಘನಾ ರಾಜ್

spot_img
- Advertisement -
- Advertisement -

ನಟ ಚಿರಂಜೀವಿ ಸರ್ಜಾ ನಮ್ಮೆನ್ನೆಲ್ಲಾ ಅಗಲಿ ಆಗಲೇ 17 ದಿನಗಳು ಕಳೆದು ಹೋಗಿದೆ. ಚಿರು ಇನ್ನಿಲ್ಲ ಅನ್ನೋ ಸತ್ಯವನ್ನು ಅರಗಿಸಿಕೊಳ್ಳೋದಕ್ಕೆ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಚಿರಂಜೀವಿ ಕುಟುಂಬಸ್ಥರ ನೋವು ಹೇಳತೀರದಾಗಿದೆ. ಚಿರು ಅವರನ್ನು ಅವರ ಮನೆಯವರು ಯಾವ ರೀತಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅನ್ನೋದನ್ನು ನಾವು ಅರ್ಜುನಾ ಸರ್ಜಾ ಅವರ ಆಡಿಯೋ ಸಂದೇಶ, ಮೇಘನಾ ರಾಜ್ ಅವರು ಭಾವುಕ ಪತ್ರ, ಧ್ರುವ ಅವರ ಪ್ರತಿದಿನದ ಸಾಮಾಜಿಕ ಜಾಲ ತಾಣದ ಪೋಸ್ಟ್ ಗಳ ಮೂಲಕ ನೋಡುತ್ತಲೇ ಇದ್ದೇವೆ.

ಮೊನ್ನೆ ಮೊನ್ನೆಯಷ್ಟೇ ಚಿರು ಪತ್ನಿ ಮೇಘನಾ ರಾಜ್ ಅವರು ಚಿರಂಜೀವಿ ಸರ್ಜಾ ಅವರಿಗೆ ಬರೆದ ಭಾವುಕ ಪತ್ರವಂತೂ ಓದಿದವರ ಕಣ್ಣಾಲಿಗಳನ್ನು ತೇವಗೊಳಿಸಿತ್ತು. ಚಿರು ಇಲ್ಲದೇ ಪ್ರತಿದಿನ, ಪ್ರತಿ ಕ್ಷಣವನ್ನು ಯುಗಗಳಂತೆ ಕಳೆಯುತ್ತಿದ್ದಾರೆ ಮೇಘನಾ. ಹೀಗಿರುವಾಗಲೇ ಇದೀಗ ಮೇಘನಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಎಂದಿದ್ದ ತಮ್ಮ ಹೆಸರನ್ನು ಮೇಘನಾ ರಾಜ್ ಸರ್ಜಾ ಎಂದು ಬದಲಾಯಿಸಿಕೊಂಡಿದ್ದಾರೆ. ಆ ಮೂಲಕ ತಾವೆಷ್ಟು ಚಿರು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನೋದನ್ನು ಹೇಳಿದ್ದಾರೆ.

- Advertisement -
spot_img

Latest News

error: Content is protected !!