- Advertisement -


- Advertisement -
2025 ರಲ್ಲಿ ಈಶಾನ್ಯ ರಾಜ್ಯದಲ್ಲಿ ಮಧುಚಂದ್ರದ ಸಮಯದಲ್ಲಿ ತನ್ನ ಪತಿಯನ್ನು ಹತ್ಯೆಗೈದಿದ್ದ ಇಂದೋರ್ ನಿವಾಸಿ ಸೋನಮ್ ರಘುವಂಶಿಗೆ ಮೇಘಾಲಯದ ನ್ಯಾಯಾಲಯವು ಮಂಗಳವಾರ ಜಾಮೀನು ನೀಡಿದೆ.
ಘಟನೆಯ ವಿವರ: ಇಂದೋರ್ ನಿವಾಸಿ ಸೋನಮ್ ರಘುವಂಶಿ ಪತಿ ರಾಜಾ ರಘುವಂಶಿ ಮೇ 23 ರಂದು ದಂಪತಿಗಳ ಮಧುಚಂದ್ರದ ಸಮಯದಲ್ಲಿ ನಾಪತ್ತೆಯಾಗಿದ್ದರು. ಅವರ ದೇಹವು ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿ ವಿರೂಪಗೊಂಡ ದೇಹವು ಪತ್ತೆಯಾಗಿತ್ತು. ಪೊಲೀಸರ ಕಾರ್ಯಾಚರಣೆಯ ಬಳಿಕ ರಾಜಾ ರಘುವಂಶಿ ಅವರನ್ನು ಅವರ ಪತ್ನಿ ಮತ್ತು ಗೆಳೆಯ ಸೇರಿ ಕೊಲೆ ಮಾಡಿದ್ದರು ಎನ್ನುವ ಸತ್ಯ ಬಯಲಾಗಿದೆ.
ಈ ಪ್ರಕರಣದಲ್ಲಿ ಸೋನಮ್ ಮತ್ತು ಆಕೆಯ ಗೆಳೆಯ ಹಾಗೂ ಹಲವರನ್ನು ಬಂಧಿಸಲಾಗಿತ್ತು.
- Advertisement -


