Wednesday, June 3, 2026
Homeತಾಜಾ ಸುದ್ದಿಗ್ರಾ. ಪಂ.ಸದಸ್ಯರ ಗೌರವ ಧನ ಹೆಚ್ಚಳ ಸಂಬಂಧ ಮಾರ್ಚ್ 14ರಂದು ಸರ್ಕಾರದಿಂದ ಸಭೆ

ಗ್ರಾ. ಪಂ.ಸದಸ್ಯರ ಗೌರವ ಧನ ಹೆಚ್ಚಳ ಸಂಬಂಧ ಮಾರ್ಚ್ 14ರಂದು ಸರ್ಕಾರದಿಂದ ಸಭೆ

- Advertisement -
- Advertisement -

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ‌‌ ಹೆಚ್ಚಳ ವಿಚಾರ ಸಂಬಂಧ ಮಾರ್ಚ್ 14 ರಂದು ಸಭೆ ನಡೆಯಲಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್‌. ಈಶ್ವರಪ್ಪ ವಿಧಾನ ಪರಿಷತ್ ನಲ್ಲಿ ಗೌರವ ಧನ‌ ಹೆಚ್ಚಳ ಸಂಬಂಧ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಳ‌ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಒತ್ತಡ ಹಾಕಿದ್ದರು.

ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ 25 ವಿಧಾನ ಪರಿಷತ್ ಸದಸ್ಯರನ್ನು ಕಳುಹಿಸಿ ಅಲ್ಲಿನ‌ ವ್ಯವಸ್ಥೆ ಅಧ್ಯಯನ ಮಾಡಿ ನಂತರ ಸಿಎಂ ಜೊತೆ ಸಭೆ ಏರ್ಪಡಿಸುವುದಾಗಿ ಸಚಿವ ಈಶ್ವರಪ್ಪ ಭರವಸೆ ನೀಡಿದ್ದಾರೆ. ‌

- Advertisement -

Latest News

error: Content is protected !!