Wednesday, June 24, 2026
Homeಕರಾವಳಿಉಡುಪಿಕುಂದಾಪುರ: ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ವಸೂಲಿ, ಓರ್ವ ವಶಕ್ಕೆ

ಕುಂದಾಪುರ: ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ವಸೂಲಿ, ಓರ್ವ ವಶಕ್ಕೆ

- Advertisement -
- Advertisement -

ಕುಂದಾಪುರ: ಮಟ್ಕಾ ಜುಗಾರಿ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಲ್ಲಿನ ವಡೇರಹೋಬಳಿಯ ವಿನಾಯಕ ಜಂಕ್ಷನಿನ ರಿಕ್ಷಾ ನಿಲ್ದಾಣದ ಬಳಿಯಲ್ಲಿ ಮಟ್ಕಾ ಜುಗಾರಿ ಆಟಕ್ಕೆ ಕಟ್ ಬೇಲ್ಲೂರಿನ ಮಂಜುನಾಥ ಬಿ ( 66 ) ಎಂಬುವಾತ ಹಣ ಸಂಗ್ರಹ ಮಾಡುತ್ತಿದ್ದ.

ಕುಂದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸದಾಶಿವ ಗವರೋಜಿ ಅವರು ರೌಂಡ್ಸ್ ಕರ್ತವ್ಯದಲ್ಲಿ ಇದ್ದ ವೇಳೆ ಖಚಿತ ಮಾಹಿತಿ ಪಡೆದು ಇತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಈತನನ್ನು ವಶಕ್ಕೆ ಪಡೆದು ಆತನಿಂದ ನಗದು ಹಾಗೂ ಮಟ್ಕಾ ಜುಗಾರಿ ಆಟಕ್ಕೆ ಬಳಸುವ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!