Wednesday, June 24, 2026
Homeಅಪರಾಧಬೆಳ್ತಂಗಡಿಯ ಗರ್ಡಾಡಿಯಲ್ಲಿ KSRTC ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ : ಸ್ಕೂಟರ್ ನಲ್ಲಿದ್ದ ಇಬ್ಬರು...

ಬೆಳ್ತಂಗಡಿಯ ಗರ್ಡಾಡಿಯಲ್ಲಿ KSRTC ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ : ಸ್ಕೂಟರ್ ನಲ್ಲಿದ್ದ ಇಬ್ಬರು ಸಾವು

- Advertisement -
- Advertisement -

ಬೆಳ್ತಂಗಡಿ : ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ಗರ್ಡಾಡಿಯ ನಂದಿಬೆಟ್ಟದಲ್ಲಿ ನಡೆದಿದೆ. ಕುಂದಾಪುರದಿಂದ ಧರ್ಮಸ್ಥಳ ಕಡೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಸ್ಕೂಟರ್ ನಡುವೆ ಅಪಘಾತ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಬಳಿ ನಡೆದಿರುವ ಅಪಘಾತವಾಗಿದ್ದು ತಕ್ಷಣ ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಓರ್ವ ಸಾವನ್ನಪ್ಪಿದ ಮತ್ತೊಬ್ಬ ಮಂಗಳೂರು ಆಸ್ಪತ್ರೆಗೆ ಸಾಗಿಸಲು ಮುಂದಾದಾಗ ದಾರಿಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ‌‌.

ಮೃತರನ್ನು ಸಾದಿಕ್ (32) ಸಿರಾಜ್(28) ಎಂದು ಗುರುತಿಸಲಾಗಿದೆ. ಇವರಿಬ್ಬರು ಸಹೋದರರು. ನಿವೃತ್ತ ಶಿಕ್ಷಕ ದಿ.ಅಬ್ದುಲ್ ರಝಾಕ್ ಅವರಿಗೆ ಒಟ್ಟು 14 ಮಕ್ಕಳು ಅದರಲ್ಲಿ 10 ಗಂಡು ಮಕ್ಕಳು ಮತ್ತು 4 ಹೆಣ್ಣು ಮಕ್ಕಳು ಅದರಲ್ಲಿ ಸಾವನ್ನಪ್ಪಿದವರು ನಾಲ್ಕನೆ ಮಗ ಸಾಧಿಕ್ , ಆರನೇ ಮಗ ಸಿರಾಜ್ ಅಗಿದ್ದಾರೆ.

- Advertisement -

Latest News

error: Content is protected !!