Wednesday, June 24, 2026
Homeಕರಾವಳಿಕಾರ್ಕಳದಲ್ಲಿ ಕಳೆಗಟ್ಟಿದ ಸಾಂಸ್ಕೃತಿಕ ಉತ್ಸವ, ಕಲಾ ತಂಡಗಳ ಮೆರವಣಿಗೆ

ಕಾರ್ಕಳದಲ್ಲಿ ಕಳೆಗಟ್ಟಿದ ಸಾಂಸ್ಕೃತಿಕ ಉತ್ಸವ, ಕಲಾ ತಂಡಗಳ ಮೆರವಣಿಗೆ

- Advertisement -
- Advertisement -

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹತ್ತು ದಿನಗಳ ಕಾಲದ ಕಾರ್ಕಳ ಸಾಂಸ್ಕೃತಿಕ ಉತ್ಸವ ಕಳೆಕಟ್ಟಿದೆ. ಕಾರ್ಕಳ‌ ನಗರದ ಪ್ರಮುಖ ರಸ್ತೆಗಳಲ್ಲಿ ವೈಭವದ ಮೆರವಣಿಗೆ ನಡೆದಿದ್ದು, ಸುಮಾರು 150ಕ್ಕಿಂತ ಹೆಚ್ಚು ಕಲಾತಂಡಗಳು ಭಾಗಿಯಾಗಿವೆ.

ಮೆರವಣಿಗೆಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಕಲಾವಿದರು ಭಾಗಿಯಾಗಿದ್ದು, ಕಾರ್ಕಳ ತಾಲೂಕಿನ 4000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಬಂಡಿ ಮಠದಿಂದ ಸ್ವರಾಜ್ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕಲಾತಂಡಗಳು ಭಾಗಿಯಾಗಿವೆ.

ಮುಂದಿನ ವರ್ಷದಿಂದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಉತ್ಸವ ನಡೆಸಿ ರಾಜ್ಯದ ಎಲ್ಲಾ ಕಲಾ ತಂಡಗಳ ಕಾರ್ಯಕ್ರಮ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಈ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ.

- Advertisement -

Latest News

error: Content is protected !!