Friday, June 5, 2026
Homeತಾಜಾ ಸುದ್ದಿಕಾಶ್ಮೀರ ಹತ್ಯೆ, ಗೋವು ಕಳ್ಳ ಸಾಗಾಣಿಕೆದಾರರ ಹತ್ಯೆ ಎರಡೂ ಒಂದೇ: ನಟಿ ಸಾಯಿ ಪಲ್ಲವಿ ಹೇಳಿಕೆಗೆ...

ಕಾಶ್ಮೀರ ಹತ್ಯೆ, ಗೋವು ಕಳ್ಳ ಸಾಗಾಣಿಕೆದಾರರ ಹತ್ಯೆ ಎರಡೂ ಒಂದೇ: ನಟಿ ಸಾಯಿ ಪಲ್ಲವಿ ಹೇಳಿಕೆಗೆ ಭಾರೀ ವಿರೋಧ

- Advertisement -
- Advertisement -

ನಟಿ ಸಾಯಿ ಪಲ್ಲವಿ ತಮ್ಮ ನೇರ ಮಾತುಗಳಿಗೆ ಖ್ಯಾತರಾಗಿದ್ದಾರೆ. ರಾಣಾ ದಗ್ಗುಬಾಟಿ ಜೊತೆಗಿನ ಅವರ ಹೊಸ ಸಿನಿಮಾ ‘ವಿರಾಟ ಪರ್ವಂ’ ಜೂನ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಇದರ ಪ್ರಮೋಷನ್ ನಲ್ಲಿ ನಟಿ ನಿರತರಾಗಿದ್ದಾರೆ. ಇದರ ಮಧ್ಯೆ ಯುಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಸಾಯಿ ಪಲ್ಲವಿ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಪರ – ವಿರೋಧದ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಸಂದರ್ಶನದಲ್ಲಿ ಸಾಯಿ ಪಲ್ಲವಿಯರ ರಾಜಕೀಯ ನಿಲುವಿನ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆಕೆ, ನಾನು ಎಡಪಂಥೀಯಳೂ ಅಲ್ಲ ಬಲಪಂಥೀಯಳೂ ಅಲ್ಲ. ಈ ವಿಚಾರದಲ್ಲಿ ತಟಸ್ಥ ನಿಲುವು ಹೊಂದಿದ್ದೇನೆ. ಎಡ ಮತ್ತು ಬಲ ಪಂಥೀಯರ ವಿಚಾರದಲ್ಲಿ ಯಾರದು ತಪ್ಪು ಯಾರದು ಸರಿ ಎಂದು ನನಗೆ ತಿಳಿದಿಲ್ಲ ಎಂದರು.

ಮುಂದುವರೆದು ಮಾತನಾಡಿದ ಅವರು, ಕಾಶ್ಮೀರ ಫೈಲ್ಸ್ ಚಿತ್ರದಲ್ಲಿ ಪಂಡಿತರ ಹತ್ಯೆ ಕುರಿತು ಸಮಗ್ರ ಚಿತ್ರಣ ನೀಡಲಾಗಿದೆ. ಅಲ್ಲದೆ ಇತ್ತೀಚೆಗೆ ವ್ಯಕ್ತಿಯೊಬ್ಬ ಗೋವನ್ನು ತೆಗೆದುಕೊಂಡು ಹೋಗುತ್ತಿದ್ದಾನೆ ಎಂಬ ಕಾರಣಕ್ಕೆ ಹತ್ಯೆಗೈಯ್ಯಲಾಗಿದೆ. ಇದಕ್ಕೆ ಕಾರಣ ಆತ ಮುಸ್ಲಿಂ ಎಂಬ ಅನುಮಾನ ಎಂದ ಸಾಯಿ ಪಲ್ಲವಿ, ದಾಳಿಕೋರರು ಈ ಹತ್ಯೆ ಬಳಿಕ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಹೀಗಾಗಿ ಈ ಎರಡು ಪ್ರಕರಣಗಳಿಗೆ ವ್ಯತ್ಯಾಸವೇನು ಎಂದು ಪ್ರಶ್ನಿಸಿದ್ದಾರೆ.

ನನ್ನ ಪ್ರಕಾರ ಕಾಶ್ಮೀರ ಹತ್ಯಾಕಂಡ ಹಾಗೂ ಗೋವು ಕಳ್ಳಸಾಗಾಣಿಕೆದಾರರ ಹತ್ಯೆ ಎರಡೂ ಕೂಡ ಒಂದೇ ಎಂದಿರುವ ಸಾಯಿ ಪಲ್ಲವಿ, ನನ್ನ ಕುಟುಂಬ ಸಮಾಜದಲ್ಲಿ ನಾನು ಓರ್ವ ಉತ್ತಮ ವ್ಯಕ್ತಿಯಾಗಿ ಬದುಕುವಂತೆ ನನ್ನನ್ನು ರೂಪಿಸಿದೆ. ಮಾನವೀಯ ಗುಣವುಳ್ಳ ವ್ಯಕ್ತಿಯಾಗಿ ಬದುಕಿದರೆ ಅಷ್ಟೇ ಸಾಕು ಎಂದಿದ್ದಾರೆ.

ನಟಿ ಸಾಯಿ ಪಲ್ಲವಿ, ಕಾಶ್ಮೀರ ಹತ್ಯಾಕಾಂಡವನ್ನು ಗೋವು ಕಳ್ಳಸಾಗಾಣಿಕೆದಾರರ ಹತ್ಯೆ ಜೊತೆಗೆ ಹೋಲಿಸಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗೆ – ಕಾರಣವಾಗಿದೆ. ಕೆಲವರು ಆಕೆ ಹೇಳಿರುವುದು ಸರಿ ಅಂದರೆ ಮತ್ತೆ ಕೆಲವರು ಈ ಎರಡರ ಮಧ್ಯೆ ಹೋಲಿಕೆಯೇ ಸರಿಯಲ್ಲ. ಇವೆರಡೂ ಒಂದೇ ಆಗಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!