Monday, August 31, 2026
Homeತಾಜಾ ಸುದ್ದಿಲಲಿತಾ ಪಂಚಮಿಯಂದು ಮುಜರಾಯಿ ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಸುವಂತೆ ಮುಜರಾಯಿ ಇಲಾಖೆಯಿಂದ ಸುತ್ತೋಲೆ

ಲಲಿತಾ ಪಂಚಮಿಯಂದು ಮುಜರಾಯಿ ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಸುವಂತೆ ಮುಜರಾಯಿ ಇಲಾಖೆಯಿಂದ ಸುತ್ತೋಲೆ

- Advertisement -
- Advertisement -

ಬೆಂಗಳೂರು: ನವರಾತ್ರಿಯ ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಆಯುಕ್ತರಿಂದ ಸುತ್ತೋಲೆ ಹೊರಡಿಸಲಾಗಿದೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆಯಂತೆ ಸುತ್ತೋಲೆ ಹೊರಡಿಸಲಾಗಿದ್ದು, ಸೆಪ್ಟೆಂಬರ್‌ 30 ರಂದು ನಡೆಯಲಿರುವ ಸಾಮೂಹಿಕ ಕುಂಕುಮಾರ್ಚನೆ ನಡೆಯಲಿದೆ. ಹಿಂದೂ ಮಹಿಳೆಯರ ಸಮ್ಮುಖದಲ್ಲಿ ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸೂಚನೆ ನೀಡಲಾಗಿದೆ.

ಒಂದು ವೇಳೆ ಸೆಪ್ಟೆಂಬರ್‌ 30 ರಂದು ಸಾಮೂಹಿಕ ಕುಂಕುಮಾರ್ಚನೆ ನಡೆಸಲು ಕಾರಣಾಂತರಗಳಿಂದ ಸಾಧ್ಯವಾಗದಿದ್ದಲ್ಲಿ ಅಕ್ಟೋಬರ್ 3 ರಂದು ದುರ್ಗಾಷ್ಠಮಿಯಂದು ನಡೆಸಲು ನಿರ್ದೇಶನ ನೀಡಲಾಗಿದೆ.

- Advertisement -

Latest News

error: Content is protected !!