Monday, June 8, 2026
Homeಇತರವಿವಾಹಿತ ಯುವಕನಿಂದ ಅಪ್ರಾಪ್ತೆಯ ಕಿಡ್ನಪ್ ಪ್ರಕರಣ..! ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು ...!

ವಿವಾಹಿತ ಯುವಕನಿಂದ ಅಪ್ರಾಪ್ತೆಯ ಕಿಡ್ನಪ್ ಪ್ರಕರಣ..! ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು …!

- Advertisement -
- Advertisement -

ವಿಟ್ಲ : ವಿವಾಹಿತ ಯುವಕನೊಬ್ಬನು ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬ೦ಧ ಬಾಲಕಿಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಚನೆಯಂತೆ ವಿಟ್ಲ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಆರೋಪಿಯನ್ನು ಹಿಡಿದು ಗ್ರಾಮದ ಕೋಲ್ಪೆ ನಿವಾಸಿ ಮಹಮ್ಮದ್ ಎಂಬವರ ಮಗ ಶಮೀರ್ ಎಂದು ಗುರುತಿಸಲಾಗಿದೆ.

ಎಳೆವಯಸ್ಸಲ್ಲೇ ಹೆತ್ತವರ ವಿರೋಧದ ನಡುವೆಯೂ ಸ್ಥಳೀಯ ಯುವತಿಯನ್ನು ವಿವಾಹವಾಗಿದ್ದ ಶಮೀರ್ ಬಳಿಕ ಆಕೆಯನ್ನು ತ್ಯಜಿಸಿದ್ದಾನೆ. ಈತನು ಆಕೆಗೆ ಬೇರೆ ಯುವಕನ ಜೊತೆ ವಿವಾಹ ಮಾಡಿರುವ ಬಗ್ಗೆ ಸ್ಥಳೀಯರಿಂದ ತಿಳಿದಿದೆ.

ಈ ಹಿಂದೆ ಈತನನ್ನು ಪುತ್ತೂರು ನಗರ ಠಾಣಾ ಪೊಲೀಸರು ಶಾಲಾ ಬಾಲಕಿಯರನ್ನು ಚುಡಾಯಿಸಿದ ಆರೋಪದಲ್ಲಿ ವಶಕ್ಕೆ ಪಡೆದು ಗೂಸ ನೀಡಿದ್ದರು.

ಇದೀಗ ಮತ್ತೆ ತನ್ನದೇ ಗ್ರಾಮದ ಅಪಾಪ್ರೆ(17)ಯನ್ನು ಪುಸಲಾಯಿಸಿದ ಆರೋಪಿ ಶುಕ್ರವಾರ ಮಧ್ಯಾಹ್ನ ಕರೆದೊಯ್ದಿರುವ ಬಗ್ಗೆ ಮಾಹಿತಿ ಪಡೆದ ಆಕೆಯ ಹೆತ್ತವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ ಮಾಹಿತಿಯಂತೆ ವಿಟ್ಲ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!