Sunday, June 7, 2026
Homeಕರಾವಳಿಬೆಳ್ತಂಗಡಿ : ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ನಿಡಿಗಲ್ ಸೇತುವೆಯಲ್ಲಿ ಬಿರುಕು!

ಬೆಳ್ತಂಗಡಿ : ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ನಿಡಿಗಲ್ ಸೇತುವೆಯಲ್ಲಿ ಬಿರುಕು!

- Advertisement -
- Advertisement -

ಬೆಳ್ತಂಗಡಿ : ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನಿಡಿಗಲ್ ಸೇತುವೆ ಸಂಪೂರ್ಣಗೊಂಡು ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಸೇತುವೆಯ ಒಂದು ಭಾಗದಲ್ಲಿ ಗುಂಡಿಗಳು ನಿರ್ಮಾಣವಾಗಿದೆ.

ಸುಮಾರು ನಾಲ್ಕರಿಂದ ಐದು ಹೊಂಡಗಳು ರಸ್ತೆಯ ಮಧ್ಯಭಾಗದಲ್ಲೇ ನಿರ್ಮಾಣವಾಗಿದ್ದು, ಕಬ್ಬಿಣದ ಕಂಬಿ ಹೊರಗಡೆ ಕಾಣುತ್ತಿದೆ. ಕಳೆದ ನವೆಂಬರ್ 22 ರಂದು ಉದ್ಘಾಟನೆಗೊಂಡಿರುವ ಈ ಸೇತುವೆ ಕಾಮಗಾರಿಯ ಬಗ್ಗೆ ನಾಗರಿಕರಲ್ಲಿ ಅನುಮಾನ ಮೂಡಿದ್ದು, ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕೃಷ್ಣಕುಮಾರ್ ರವರು ಸೇತುವೆ ಬಿರುಕು ಬಿಟ್ಟಿರುವ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಇದನ್ನು ಕೂಡಲೇ ಸರಿಪಡಿಸಲಾಗುವುದು ಹಾಗೂ ನಾಳೆಯಿಂದಲೇ ಕೆಲಸ ಆರಂಭಗೊಳ್ಳಲಿದೆ. ಕೆಲಸ ಮಾಡುವಾಗ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಸುಮಾರು 21 ದಿನಗಳ ಕಾಲ ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!