Thursday, June 4, 2026
Homeತಾಜಾ ಸುದ್ದಿಆತ್ಮಹತ್ಯೆ ಮಾಡಿಕೊಳ್ಳಲು ಜೊತೆಯಾಗಿ ಹೋದ ಯುವಕ ಹಾಗೂ ವಿವಾಹಿತ ಮಹಿಳೆ: ಪ್ರಿಯತಮೆ ನದಿಗೆ ಹಾರುತ್ತಿದ್ದಂತೆ ಹುಡುಗ...

ಆತ್ಮಹತ್ಯೆ ಮಾಡಿಕೊಳ್ಳಲು ಜೊತೆಯಾಗಿ ಹೋದ ಯುವಕ ಹಾಗೂ ವಿವಾಹಿತ ಮಹಿಳೆ: ಪ್ರಿಯತಮೆ ನದಿಗೆ ಹಾರುತ್ತಿದ್ದಂತೆ ಹುಡುಗ ಎಸ್ಕೇಪ್ :  ಕೊನೆ ಕ್ಷಣದಲ್ಲಿ ಕೈಕೊಟ್ಟ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಆಂಟಿ

- Advertisement -
- Advertisement -

ನವದೆಹಲಿ; ಲವ್ ಸ್ಟೋರಿ ಮತ್ತು ವಿಚಿತ್ರ ಸುಸೈಡ್ ಕಥೆ ಇದೀಗ ವ್ಯಾಪಕವಾಗಿ ಸುದ್ದಿಯಾಗಿದೆ. ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳದೆ ಪ್ರಿಯಕರ ನನಗೆ ಮೋಸ‌ ಮಾಡಿದ‌ ಎಂದು‌‌ ಮಹಿಳೆಯೊಬ್ಬಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಉತ್ತರಪ್ರದೇಶದ  ಪ್ರಯಾಗ್ ರಾಜ್ ನಲ್ಲಿ  ‌32 ವರ್ಷದ ವಿವಾಹಿತ ಮಹಿಳೆ 30 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು.‌ ಆದರೆ ಪ್ರೀತಿಗೆ ಎದುರಾದ ಕೌಟುಂಬಿಕ ‌ಕಾರಣದಿಂದ‌ ಇಬ್ಬರು ಕೂಡ ಆತ್ಮಹತ್ಯೆಗೆ ತೀರ್ಮಾನಿಸಿದ್ದರು.ಅದರಂತೆ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲಿಂದ ಜಿಗಿದು
ಒಂದೇ ಸಮಯದಲ್ಲಿ ಇಬ್ಬರು ಪ್ರಾಣ ಬಿಡುವುದು ಪ್ರೇಮಿಗಳಿಬ್ಬರ ಪ್ಲ್ಯಾನ್ ಆಗಿತ್ತು. ಅದರಂತೆ ಮಹಿಳೆ ನದಿಗೆ ಹಾರಿದ್ದಾಳೆ. ಆದರೆ ಯುವಕ‌ ಹೆದರಿ ವಾಪಾಸ್ಸು ಬಂದಿದ್ದಾನೆ‌.

ಈಜಿ ‌ದಡ ಸೇರಿದ ಮಹಿಳೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಯುವಕನ‌ ವಿರುದ್ಧ ವಂಚನೆ‌, ಕೊಲೆಯತ್ನ‌ ಕೇಸ್ ದಾಖಲಿಸಿದ್ದಾಳೆ. ನನ್ನ ಪ್ರಿಯಕರ ನನ್ನ ಜೊತೆ ನದಿಗೆ ಹಾರಿಲ್ಲ. ಆತ್ಮಹತ್ಯೆ ಟೈಮ್‌ನಲ್ಲೂ ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರು ದಾಖಲು ಮಾಡಿದ್ದಾಳೆ.

- Advertisement -

Latest News

error: Content is protected !!