Sunday, November 8, 2026
Homeಕರಾವಳಿಮಂಗಳೂರುಬೆಳ್ತಂಗಡಿ:ದೇವೀರಮ್ಮ ಬೆಟ್ಟ ಹತ್ತುವಾಗ ಕುಸಿದು ಬಿದ್ದು ಕನ್ಯಾಡಿಯ ವ್ಯಕ್ತಿ ಸಾವು!

ಬೆಳ್ತಂಗಡಿ:ದೇವೀರಮ್ಮ ಬೆಟ್ಟ ಹತ್ತುವಾಗ ಕುಸಿದು ಬಿದ್ದು ಕನ್ಯಾಡಿಯ ವ್ಯಕ್ತಿ ಸಾವು!

- Advertisement -
- Advertisement -

ಬೆಳ್ತಂಗಡಿ: ದೇವೀರಮ್ಮ ಬೆಟ್ಟ ಹತ್ತುವ ವೇಳೆ ಕುಸಿದು ಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿವಾಸಿಯೊಬ್ಬರು ಮೃತಪಟ್ಟಿದ್ದು, ಮತ್ತೋರ್ವ ಭಕ್ತ ಕಾಲುಜಾರಿ ಬಿದ್ದು ಅಸ್ವಸ್ಥಗೊಂಡಿರುವ ಘಟನೆ ನವೆಂಬರ್ 8ರಂದು ಸಂಭವಿಸಿದೆ. ಕನ್ಯಾಡಿ ನಿವಾಸಿ ಲಕ್ಷ್ಮಣ್ (35) ಮೃತಪಟ್ಟ ದುರ್ದೈವಿ.

ಬೆಂಗಳೂರಿನ ಬಾಷ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಲಕ್ಷ್ಮಣ್, ಹೂವಿನಹಳ್ಳಿಯಲ್ಲಿರುವ ತಮ್ಮ ಭಾವನ ಮನೆಗೆ ಆಗಮಿಸಿದ್ದರು. ರಾತ್ರಿಯಿಡೀ ಪ್ರಯಾಣ ಮಾಡಿ ಬಂದಿದ್ದ ಅವರು, ವಿಶ್ರಾಂತಿ ಪಡೆಯದೆ ಬೆಳಗಿನ ಜಾವ ಭಾವನೊಂದಿಗೆ ಮಲ್ಲೇನಹಳ್ಳಿ ಮಾರ್ಗವಾಗಿ ದೇವೀರಮ್ಮ ಬೆಟ್ಟ ಹತ್ತಲು ತೆರಳಿದ್ದರು. ಈ ವೇಳೆ ಗುಡ್ಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಂಜು ಮುಸುಕಿದ್ದು, ಬೆಟ್ಟ ಹತ್ತುತ್ತಿದ್ದಂತೆ ಲಕ್ಷ್ಮಣ್ ಏಕಾಏಕಿ ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಕೆಳಕ್ಕೆ ತಂದು, ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇನ್ನೊಂದೆಡೆ ಮಾಣಿಕ್ಯಾಧಾರ ಜಲಪಾತದ ಮಾರ್ಗದಲ್ಲಿ ಬೆಟ್ಟ ಹತ್ತುತ್ತಿದ್ದ ಮಂಡ್ಯ ಮೂಲದ ಸುನೀಲ್ (31) ಎಂಬುವರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಭಕ್ತರು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡ ಸುನೀಲ್ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!