Saturday, November 7, 2026
Homeಕರಾವಳಿಬಿ.ಸಿ.ರೋಡಿನಲ್ಲಿ ಕಳವಾದ ಬುಲೆಟ್ ಮಂಜೇಶ್ವರದಲ್ಲಿ ಪತ್ತೆ; ಬೈಕ್ ಕಳವು ಪ್ರಕರಣಗಳಿಂದ ಸವಾರರಲ್ಲಿ ಆತಂಕ

ಬಿ.ಸಿ.ರೋಡಿನಲ್ಲಿ ಕಳವಾದ ಬುಲೆಟ್ ಮಂಜೇಶ್ವರದಲ್ಲಿ ಪತ್ತೆ; ಬೈಕ್ ಕಳವು ಪ್ರಕರಣಗಳಿಂದ ಸವಾರರಲ್ಲಿ ಆತಂಕ

- Advertisement -
- Advertisement -

ಬಂಟ್ವಾಳ: ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಲಾಗಿದ್ದ ಬುಲೆಟ್ ಬೈಕ್ ಕಳವಾದ ಘಟನೆಗೆ ಸಂಬಂಧಿಸಿದಂತೆ, ಒಂದು ವಾರದ ಬಳಿಕ ಕಳವಾದ ಬೈಕ್ ಮಂಜೇಶ್ವರದಲ್ಲಿ ಪತ್ತೆಯಾಗಿದ್ದು, ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಪಣೋಲಿಬೈಲು ನಿವಾಸಿ ರಮೇಶ್ ಅವರಿಗೆ ಸೇರಿದ ಬುಲೆಟ್ ಬೈಕ್ ಅನ್ನು ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಬೈಕ್ ನಾಪತ್ತೆಯಾಗಿದ್ದು, ಕಳವಾಗಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಆತಂಕಕ್ಕೊಳಗಾಗಿದ್ದ ವಾರಸುದಾರರಿಗೆ ಇದೀಗ ಮಂಜೇಶ್ವರದಲ್ಲಿ ಬೈಕ್ ಪತ್ತೆಯಾಗಿರುವ ಸುದ್ದಿ ಸಮಾಧಾನ ತಂದಿದೆ.

ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಭಾಗದಲ್ಲಿ ಪದೇಪದೆ ಬೈಕ್ ಕಳವು ಪ್ರಕರಣಗಳು ವರದಿಯಾಗುತ್ತಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

ವಾಹನಗಳನ್ನು ನಿಲ್ಲಿಸಿ ತೆರಳುವವರು ಮರಳಿ ಬರುವವರೆಗೆ ಅವುಗಳ ಸುರಕ್ಷತೆಯ ಬಗ್ಗೆ ಚಿಂತಿಸುವಂತಾಗಿದೆ. ಅದರಲ್ಲೂ ಪೊಲೀಸ್ ಠಾಣೆಯ ಸಮೀಪದಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.

ಫ್ಲೈಓವರ್ ಅಡಿಭಾಗದಲ್ಲಿ ವಾಹನಗಳ ನಿಲುಗಡೆ ಹೆಚ್ಚಿದ್ದರೂ, ಅವುಗಳ ಸುರಕ್ಷತೆಗಾಗಿ ಅಗತ್ಯ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಬೇಡಿಕೆ ಇನ್ನೂ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ನಿಗಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!