Wednesday, May 15, 2024
Homeತಾಜಾ ಸುದ್ದಿಲಾಕ್ ಡೌನ್ ಸಮಯದಲ್ಲಿ ಕರ್ನಾಟಕದಲ್ಲಿ ಎಷ್ಟು ಮದುವೆ ನಡೆದಿದೆ ಗೊತ್ತಾ? ಯಾವ ಜಿಲ್ಲೆಯಲ್ಲಿ ಹೆಚ್ಚು ?

ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದಲ್ಲಿ ಎಷ್ಟು ಮದುವೆ ನಡೆದಿದೆ ಗೊತ್ತಾ? ಯಾವ ಜಿಲ್ಲೆಯಲ್ಲಿ ಹೆಚ್ಚು ?

spot_img
- Advertisement -
- Advertisement -

ಬಳ್ಳಾರಿ: ಸಾಮಾನ್ಯವಾಗಿ ಫೆಬ್ರವರಿಯಿಂದ ಶುರುವಾಗಿ ಮೇ ತಿಂಗಳಿನವರೆಗೆ ರಾಜ್ಯದೆಲ್ಲೆಡೆ ಲಕ್ಷಾಂತರ ಮದುವೆ ಕಾರ್ಯಗಳು ನಡೆಯುತ್ತಿದ್ದವು. ಆದರೆ ಕೊರೋನಾ ಲಾಕ್ ಡೌನ್ ನಿಂದಾಗಿ ಜನಜೀವನನೇ ಅಸ್ತವ್ಯಸ್ತವಾಗಿದೆ. ಇದರೊಂದಿಗೆ ಅದ್ದೂರಿಯಾಗಿ ಆಗಬೇಕಿದ್ದ ಮದುವೆ ಸಮಾರಂಭಗಳು ಸದ್ದಿಲ್ಲದೇ 50 ಜನಗಳ ಕೂಡುವಿಕೆಯಲ್ಲಿ ಸರಳವಾಗಿ ನಡೆಯುತ್ತಿದೆ.

ಸಾಮೂಹಿಕ ಮದುವೆ ಕಾರ್ಯಕ್ರಮಗಳು, ಬೃಹತ್ ಸಂಖ್ಯೆಯಲ್ಲಿ ಮದುವೆಗೆ ಜನ ಸೇರುವುದಕ್ಕೆ ಸರ್ಕಾರ ತಡೆ ನೀಡಿದರೂ ಕೂಡ ಮದುವೆ ದಾಖಲಾತಿಗಳ ಪ್ರಮಾಣ ಮಾತ್ರ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕಡಿಮೆಯೇನೂ ಆಗಿಲ್ಲ ಎನ್ನುತ್ತದೆ ವರದಿ.

ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ ರಾಜ್ಯದೆಲ್ಲೆಡೆ ಸರ್ಕಾರದ ಅನುಮತಿ ಪಡೆದು ಮಾರ್ಚ್ ನಿಂದ ಜೂನ್ ತಿಂಗಳವರೆಗೆ 40 ಸಾವಿರಕ್ಕೂ ಹೆಚ್ಚು ಮದುವೆಗಳಾಗಿದ್ದು, ಅಚ್ಚರಿ ಎಂಬಂತೆ ಬಳ್ಳಾರಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು 12 ಸಾವಿರದಷ್ಟು ಮದುವೆಗಳು ನಡೆದಿವೆಯಂತೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಾಕ್ ಡೌನ್ ನಿರ್ಬಂಧದಿಂದಾಗಿ ರಿಜಿಸ್ಟರ್ ಮದುವೆ ಜಾಸ್ತಿಯಾಗಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ 1,141 ಮದುವೆಗಳು ರಿಜಿಸ್ಟರ್ ಆಗಿದ್ದರೆ, ಕಳೆದ ಮೂರು ತಿಂಗಳಲ್ಲಿ 12,300 ಮದುವೆಗಳು ರಿಜಿಸ್ಟರ್ ಆಗಿವೆ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!