Thursday, June 4, 2026
Homeಕರಾವಳಿದನ ಕಳ್ಳತನದ ಆರೋಪಿಗೆ ಕೊರೋನಾ: ಸುಳ್ಯ ಪೊಲೀಸ್ ಠಾಣೆ ಸೀಲ್ ಡೌನ್

ದನ ಕಳ್ಳತನದ ಆರೋಪಿಗೆ ಕೊರೋನಾ: ಸುಳ್ಯ ಪೊಲೀಸ್ ಠಾಣೆ ಸೀಲ್ ಡೌನ್

- Advertisement -
- Advertisement -

ಸುಳ್ಯ: ಕಳೆದ ಜು.14ರಂದು ಸುಳ್ಯದಲ್ಲಿ ಅಕ್ರಮ ದನ ಸಾಗಾಟ ಪ್ರಕರಣದಲ್ಲಿ ಬಂಧಿತನಾದ ಕರಿಕೆಯ ಅಬ್ದುಲ್ ಫಾರೂಕ್ ಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆ ಎರಡು ಸೀಲ್ ಡೌನ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿ ಬಂಧಿಸುವ ವೇಳೆ ಕರ್ತವ್ಯ ದಲ್ಲಿದ್ದ ಎಸ್.ಐ. ಹರೀಶ್ ಸೇರಿದಂತೆ ಮೂವರು ಪೋಲೀಸ್ ಸಿಬ್ಬಂದಿಗಳು ಹೋಂ ಕ್ವಾರೆಂಟೇನ್ ಗೆ ಈಗಾಗಲೇ ತೆರಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಇಂದಿನಿಂದ ಎರಡು ದಿನಗಳ ಕಾಲ ಪೋಲಿಸ್ ಸ್ಟೇಷನ್ ಸೀಲ್ ಡೌನ್ ಮಾಡಿ ಸ್ಯಾನಿಟೈಸಿಂಗ್ ಮಾಡಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!