Friday, June 5, 2026
Homeಕರಾವಳಿಮಂಗಳೂರು :ಉಳ್ಳಾಲ ನೇತ್ರಾವತಿ ಸೇತುವೆ ತಡೆಬೇಲಿ ಕಾಮಗಾರಿಗೆ ಅಡ್ಡಿಯಾದ ಅಗ್ನಿ ಅವಘಡ

ಮಂಗಳೂರು :ಉಳ್ಳಾಲ ನೇತ್ರಾವತಿ ಸೇತುವೆ ತಡೆಬೇಲಿ ಕಾಮಗಾರಿಗೆ ಅಡ್ಡಿಯಾದ ಅಗ್ನಿ ಅವಘಡ

- Advertisement -
- Advertisement -

ಮಂಗಳೂರು : ನಗರದ ಹೊರವಲಯದಲ್ಲಿರುವ ಉಳ್ಳಾಲ ನೇತ್ರಾವತಿ ನದಿ ಸೇತುವೆಗೆ ನಡೆಯುತ್ತಿರುವ ತಡೆಬೇಲಿ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ಸೇತುವೆ ಮೇಲಿರಿಸಿದ್ದ ವೆಲ್ಡಿಂಗ್ ಮೆಷಿನ್ ನಲ್ಲಿ ಶಾರ್ಟ್ ಸರ್ಕ್ಯುಟ್ ಸಂಭವಿಸಿ ಅಡ್ಡಿ ಉಂಟಾಗಿದೆ.
ಉಳ್ಳಾಲ ನೇತ್ರಾವತಿ ನದಿ ಸೇತುವೆಯಲ್ಲಿ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳನ್ನು ಹೆಚ್ಚಾಗಿರುವ ಕಾರಣ ಅದನ್ನು ತಡೆಯುವ ಉದ್ದೇಶದಿಂದ ಸೇತುವೆಗೆ ತಡೆಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ.
ವೆಲ್ಡಿಂಗ್ ಮೆಷಿನ್ ನಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಆವರಿಸಿದ್ದು, ಸೇತುವೆ ಮೇಲೆ ದಟ್ಟ ಹೊಗೆ ಹಬ್ಬಿದೆ. ಸೇತುವೆಯ ಮೇಲೆ ಬೆಂಕಿ ಕಂಡು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಕಂಕನಾಡಿ ಪೊಲೀಸರು ಪ್ರಕರಣ ಸ್ಥಳಕ್ಕೆ ಭೇಟಿ ನೀಡಿ , ಬೆಂಕಿ ನಂದಿಸುವ ಕಾರ್ಯ ಆರಂಭಿಸಿದ್ದಾರೆ.

- Advertisement -

Latest News

error: Content is protected !!