Friday, June 5, 2026
Homeತಾಜಾ ಸುದ್ದಿತನ್ನ ಮೇಲೆ ದಾಳಿ ಮಾಡಿದ ಮೊಸಳೆಯನ್ನು ಕೈಯಿಂದ ಗುದ್ದಿಯೇ ಮಣಿಸಿದ ವ್ಯಕ್ತಿ

ತನ್ನ ಮೇಲೆ ದಾಳಿ ಮಾಡಿದ ಮೊಸಳೆಯನ್ನು ಕೈಯಿಂದ ಗುದ್ದಿಯೇ ಮಣಿಸಿದ ವ್ಯಕ್ತಿ

- Advertisement -
- Advertisement -

ವಡೋದರಾ : ನದಿ ಬಟ್ಟೆ ತೊಳೆಯಲೋ ಇಲ್ಲಾ ಕೈ ಕೈಲು ತೊಳೆಯಲೋ ಇಳಿದಾಗ ಇದ್ದಕ್ಕಿದ್ದಂತೆ ನಮ್ಮ ಕಾಲನ್ನೋ ಕೈಯನ್ನೋ ಹಿಡಿದುಕೊಂಡು ಆದ್ರೆ ಇಲ್ಲೊಬ್ಬ ಪುಣ್ಯಾತ್ಮ ಮೊಸಳೆಯನ್ನು ಕೇವಲ ಕೈಯಿಂದ ಗುದ್ದಿಯೇ ಮಣಿಸಿದ್ದಾನೆ ಅಂದ್ರೆ ನೀವು ನಂಬಲೇ ಬೇಕು.

ಅಂದ್ಹಾಗೆ ಆಗಿದ್ದು ಇಷ್ಟು, ವಾಗೋಡಿಯಾ ಗ್ರಾಮದ ನಿವಾಸಿ 46 ವರ್ಷದ ಜಗದೀಶ್​ ವಾಸವಾ. ದೇವ್​ ನದಿಯಲ್ಲಿ ಸ್ನಾನಕ್ಕೆಂದು ನೀರಿಗಿಳಿದಿದ್ದ. ಅಷ್ಟರಲ್ಲಿಯೇ ನದಿಯಲ್ಲಿದ್ದ 10 ಅಡಿ ಉದ್ದದ ಮೊಸಳೆ ಈತನತ್ತ ಧಾವಿಸಿ ಕೈಗೆ ಬಾಯಿ ಹಾಕಿದೆ. ಆತನನ್ನು ಎಳೆದೊಯ್ಯಲು ಮುಂದಾಗಿದೆ. ಆದರೆ, ಧೈರ್ಯಗೆಡದ ಜಗದೀಶ್​ ಇನ್ನೊಂದು ಕೈಯಿಂದ ಮೊಸಳೆಗೆ ಗುದ್ದಲು ಶುರು ಮಾಡಿದ್ದಾನೆ.

ಜಗದೀಶ್​ ನೀರಿಗಿಳಿದಿದ್ದ ಜಾಗದಲ್ಲಿ ಅಷ್ಟೇನೂ ಆಳವಿರಲಿಲ್ಲ. ಮೊಸಳೆ ತನ್ನ ಕೈಬಿಡುವವರೆಗೂ ಆತ ಅದರ ಮೇಲೆ ಹಲ್ಲೆ ನಡೆಸುತ್ತಲೇ ಇದ್ದ. ಕೊನೆಗೆ ಮೊಸಳೆ ಆತನ ಕೈ ಬಿಟ್ಟಿದೆ. ಜತೆಗೆ ಜೋರಾಗಿ ಕಿರಿಚಿದ್ದರಿಂದ ಗ್ರಾಮಸ್ಥರು ಕೂಡ ಅಲ್ಲಿಗೆ ಬಂದಿದ್ದಾರೆ. ಜಗದೀಶ್​ನ ಕೈ ಹಾಗೂ ಎದೆಗೆ ಭಾರಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ನದಿಯಲ್ಲಿ ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಮೊಸಳೆಗೆ ಬಲಿಯಾಗಿದ್ದಾರೆ. ನೀರಿಗಿಳಿಯಬೇಡಿ, ಮೊಸಳೆಗಳಿವೆ ಎಂದು ಹೇಳಿದರೂ ಜನರು ಕೇಳುತ್ತಿಲ್ಲ. ಜತೆಗೆ, ಅಪಾಯಕಾರಿ ಪ್ರದೇಶ ಎಂದು ಹಲವು ಕಡೆಗಳಲ್ಲಿ ಸೂಚನೆ ಫಲಕಗಳನ್ನು ಹಾಕಲಾಗಿದೆ ಎಮದು ಅರಣ್ಯಾಧಿಕಾರಿಗಳು ಹೇಳುತ್ತಾರೆ. ಮೊಸಳೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!