Thursday, May 2, 2024
Homeತಾಜಾ ಸುದ್ದಿಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿಗೆ ಸಾವಿರ ಕಿ.ಮೀ ದೂರದಿಂದ ಬಂತು ಎದೆಹಾಲು

ಶಸ್ತ್ರಚಿಕಿತ್ಸೆಗೆ ಒಳಗಾದ ಮಗುವಿಗೆ ಸಾವಿರ ಕಿ.ಮೀ ದೂರದಿಂದ ಬಂತು ಎದೆಹಾಲು

spot_img
- Advertisement -
- Advertisement -

ನವದೆಹಲಿ: ಸರ್ಜರಿಗೆ ಒಳಗಾದ ಒಂದು ತಿಂಗಳ ಮಗುವಿಗೆ ತಾಯಿಯ ಎದೆಹಾಲನ್ನು 1000 ಕಿ.ಮೀ.ದೂರದಿಂದ ತಂದುಕೊಟ್ಟಂಥ ಅಪರೂಪದ ಘಟನೆಯೊಂದಕ್ಕೆ ದೆಹಲಿ ಸಾಕ್ಷಿಯಾಗಿದೆ. ಲಡಾಖ್​​ನ ಲೇಹ್​ನಲ್ಲಿ ಜನಿಸಿದ್ದ ಈ ಮಗುವಿಗೆ ಹುಟ್ಟುವಾಗಲೇ ಶ್ವಾಸನಾಳ ಮತ್ತು ಆಹಾರ ನಾಳ ಎರಡೂ ಹೊಂದಿಕೊಂಡಿತ್ತು. ಮಗುವನ್ನು ಚಿಕಿತ್ಸೆಗೆಂದು ದೆಹಲಿಯ ಮ್ಯಾಕ್ಸ್​ ಆಸ್ಪತ್ರೆಗೆ ಅದರ ಅಪ್ಪ ಕರೆದುಕೊಂಡು ಬಂದಿದ್ದರು. ಮಗುವಿನ ತಾಯಿ ಹೆರಿಗೆ ಬಳಿಕ ತುಂಬ ದುರ್ಬಲಳಾಗಿ, ಅಸ್ವಸ್ಥಳಾದ ಕಾರಣ, ಅವರಿಗೆ ದೆಹಲಿ ಆಸ್ಪತ್ರೆಗೆ ಬರಲು ಸಾಧ್ಯವಾಗಲಿಲ್ಲ.

ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ಹರ್ಷವರ್ಧನ್​ ಅವರು, ಎದೆಹಾಲು ಇಲ್ಲದಿದ್ದರೆ ತುಂಬ ಕಷ್ಟವಾಗುತ್ತದೆ. ಇಷ್ಟು ಪುಟ್ಟ ಮಗುವಿನ ಇಮ್ಯುನಿಟಿ ಹೆಚ್ಚಿಸಲು ತಾಯಿ ಹಾಲು ಅತ್ಯಗತ್ಯ ಎಂದು ಹೇಳಿದ್ದಾರೆ. ನಂತರ ಲೇಹ್​​ನಿಂದ ಅಂದರೆ ದೆಹಲಿಯಿಂದ ಸುಮಾರು 1000 ಕಿ.ಮೀ.ದೂರದಿಂದ ಮಗುವಿಗೆ ತಾಯಿ ಹಾಲು ತರಿಸಲಾಯಿತು. ಒಂದು ಸಣ್ಣ ಕಂಟೇನರ್​​ನಲ್ಲಿ ಹಾಲು ತುಂಬಿ, ಲೇಹ್​ನಿಂದ ದೆಹಲಿಗೆ ಬರುವ ವಿಮಾನದಲ್ಲಿ ತರಲಾಯಿತು. ಮಗುವಿನ ತಂದೆ ಜಿಕ್​​ಮೆಟ್​ ವಾಂಗಡು, ದೆಹಲಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ತಂದಿದ್ದಾರೆ. ಇದು ಒಂದು ದಿನ ಅಲ್ಲ, ಮಗು ಆಸ್ಪತ್ರೆಯಲ್ಲಿ ಇದ್ದಷ್ಟೂ ದಿನವೂ ನಡೆಯುತ್ತಿತ್ತು.

ಘಟನೆಯ ಬಗ್ಗೆ ವಾಂಗಡು ಅವರು ತಿಳಿಸಿದ್ದಾರೆ. ನನ್ನ ಪತ್ನಿಗೂ ಆರೋಗ್ಯ ಸರಿಯಿಲ್ಲ. ಅವಳಿಗೆ ದೆಹಲಿ ಆಸ್ಪತ್ರೆಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಮಗು ಇಲ್ಲಿ ಇದ್ದಷ್ಟೂ ದಿನವೂ ಸುಮಾರು ಆರು ತಾಸುಗಳಷ್ಟು ಸಮಯ ಹಾಲು ಸಂಗ್ರಹಿಸಲು ಮೀಸಲಿಡುತ್ತಿದ್ದಳು. ಅದನ್ನು ನಂತರ ವಿಮಾನದಲ್ಲಿ ಕಳಿಸಿಕೊಡಲಾಗುತ್ತಿತ್ತು ಎಂದಿದ್ದಾರೆ. ನನಗೆ ಲೇಹ್​ ವಿಮಾನ ನಿಲ್ದಾಣದಲ್ಲಿ ಸ್ನೇಹಿತನೋರ್ವ ಇದ್ದ. ಅವನು ಈ ಕಾರ್ಯಕ್ಕೆ ತುಂಬ ಸಹಕಾರ ನೀಡಿದ. ಹಾಗೇ ದೆಹಲಿಯ ವೈದ್ಯರೂ ಕೂಡ ಮಗುವಿಗೆ ತುಂಬ ಚೆನ್ನಾಗಿ ಸರ್ಜರಿ ಮಾಡಿ, ಚಿಕಿತ್ಸೆ ನೀಡಿದರು ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!