Sunday, June 7, 2026
Homeಇತರಇನ್ಮೇಲೆ ಪಿಡಿಓಗಳೇ ಜನನ ಹಾಗೂ ಮರಣ ಪ್ರಮಾಣ ಪತ್ರ ನೀಡಬಹುದು- ಸರ್ಕಾರದಿಂದ ಆದೇಶ

ಇನ್ಮೇಲೆ ಪಿಡಿಓಗಳೇ ಜನನ ಹಾಗೂ ಮರಣ ಪ್ರಮಾಣ ಪತ್ರ ನೀಡಬಹುದು- ಸರ್ಕಾರದಿಂದ ಆದೇಶ

- Advertisement -
- Advertisement -

ಬೆಂಗಳೂರು: ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ಸರ್ಕಾರ ಇಂದು ಆದೇಶ ನೀಡಿದೆ. ಇದು ಗ್ರಾಮೀಣ ಭಾಗದ ಜನರಿಗೆ ಸಂತಸದ ವಿಚಾರವಾಗಿದೆ.

ರಾಷ್ಟ್ರೀಯ ಜನನ ಮತ್ತು ಮರಣ ಕಾಯ್ದೆ 1969ರ ಅನ್ವಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ( ಪಿಡಿಓ) ಇ ಜನ್ಮ ತಂತ್ರಾಂಶದಲ್ಲಿ ತಮ್ಮ ಡಿಜಿಟಲ್ ಸಹಿಯ ಮುಖಾಂತರ ವ್ಯಕ್ತಿಗಳ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಮ ಪಂಚಾಯತಿ, ಪಿಡಿಓ ಗಳು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಈ ಪ್ರಮಾಣ ಪತ್ರಗಳನ್ನು ಅರ್ಹರಿಗೆ ನೀಡಬೇಕು ಎಂದು ಸೂಚಿಸಲಾಗಿದೆ.

- Advertisement -

Latest News

error: Content is protected !!