Sunday, June 7, 2026
Homeಕರಾವಳಿಕಾಸರಗೋಡುವರನಿಗೆ ಕೋವಿಡ್ ಪಾಸಿಟಿವ್: ಕೇರಳದಲ್ಲಿ ಆಸ್ಪತ್ರೆಯಲ್ಲೇ ಯುವಕನನ್ನು ವರಿಸಿದ ವಧು

ವರನಿಗೆ ಕೋವಿಡ್ ಪಾಸಿಟಿವ್: ಕೇರಳದಲ್ಲಿ ಆಸ್ಪತ್ರೆಯಲ್ಲೇ ಯುವಕನನ್ನು ವರಿಸಿದ ವಧು

- Advertisement -
- Advertisement -

ಕೇರಳ :  ಮದುವೆ ಗಂಡಿಗೆ ಮದುವೆಗೆ ಕೆಲವೇ ದಿನಗಳಿರುವಾಗ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಯಲ್ಲಿ ವಿವಾಹ ನಡೆದ ಅಪರೂಪದ ಘಟನೆ ಕೇರಳದ ಆಲಪ್ಪುಳ ಜಿಲ್ಲೆಯಲ್ಲಿ ನಡೆದಿದೆ.

ವರ ಕೈನಕಾರಿ ಮೂಲದ ಶರತ್ ಸೋಮ ಹಾಗೂ  ಆತನ ತಾಯಿ ಇಬ್ಬರಿಗೂ ಮದುವೆಗೆ ಕೆಲವು ದಿನಗಳ ಮೊದಲು ಕೋವಿಡ್ ಪಾಸಿಟಿವ್ ಬಂದಿತ್ತು.  ಇಬ್ಬರನ್ನು ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ  ಮದುವೆ ದಿನಾಂಕ ಬದಲಾಯಿಸೋದು ಎರಡೂ ಕುಟುಂಬದವರಿಗೂ ಇಷ್ಟವಿರಲಲ್ಲ. ಹಾಗಾಗಿ ಆಸ್ಪತ್ರೆಯಲ್ಲೇ ಮದುವೆಯಾಗೋದಕ್ಕೆ ನಿರ್ಧರಿಸಿದ್ರು.  ಡಿಸಿ ಹಾಗೂ ಆಸ್ಪತ್ರೆ ಅಧೀಕ್ಷಕ ಡಾ.ಆರ್.ವಿ.ರಾಮ್‌ಲಾಲ್ ಅವರಿಂದ ಅನುಮತಿ ಪಡೆದ ನಂತರ,ವಧು ಅಭಿರಾಮಿ ಹಾಗೂ ಸಂಬಂಧಿಗಳು ಮದುವೆಯ ದಿನದಂದು ಪಿಪಿಇ ಕಿಟ್‌ನಲ್ಲಿ ಆಸ್ಪತ್ರೆಗೆ ಬಂದರು. ಅಲ್ಲೇ ವಿವಾಹವಾಗಿದ್ದಾರೆ.

ಇನ್ನು ವಿವಾಹವಾದ ಬಳಿಕ ಅಭಿರಾಮಿ ತನ್ನ ತಾಯಿ ಮನೆಗೆ ತೆರಳಿದ್ದು, ಪತಿಯ ಕೋವಿಡ್ ವರದಿ ನೆಗೆಟಿವ್ ಬಂದ ಬಳಿಕ ಅವರು ಗಂಡನ ಮನೆಗೆ ತೆರಳಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!