Friday, June 5, 2026
Homeಕರಾವಳಿಮಂಗಳೂರು : ಮುಡಾ ಆಯುಕ್ತ ಮನ್ಸೂರ್ ಅಲಿ ಮೇಲೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ; ಹಗೆತನದಿಂದ...

ಮಂಗಳೂರು : ಮುಡಾ ಆಯುಕ್ತ ಮನ್ಸೂರ್ ಅಲಿ ಮೇಲೆ ಲೈಂಗಿಕ ಕಿರುಕುಳ ಆರೋಪ ಪ್ರಕರಣ; ಹಗೆತನದಿಂದ ನನ್ನ ಮೇಲೆ ಆರೋಪ ಮಾಡಿದ್ದಾರೆಂದ ಮನ್ಸೂರ್ ಅಲಿ

- Advertisement -
- Advertisement -

ಮಂಗಳೂರು : ಮುಡಾ ಆಯುಕ್ತ ಮನ್ಸೂರ್ ಅಲಿ ಮೇಲೆ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಮನ್ಸೂರ್ ಅಲಿ ಪ್ರತಿಕ್ರಿಯಿಸಿದ್ದಾರೆ. ನನ್ನ ಮೇಲೆ ಹಗೆತನದಿಂದ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮೂಡಾ ಕಚೇರಿಯಲ್ಲಿ ಡಿ.27ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಬರೆದುಕೊಡಲು ಮಹಿಳಾ ಸಿಬ್ಬಂದಿಗೆ ತಿಳಿಸಿದ್ದೆ. ನೂರು ಪುಟಗಳ ವರದಿಯನ್ನು ತಪ್ಪು ತಪ್ಪಾಗಿ ಬರೆದುಕೊಟ್ಟಿದ್ದರು. ಇದರ ಬಗ್ಗೆ ಕೇಳಿದಕ್ಕೆ ಇಷ್ಟೊಂದು ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದರು. ಅದಕ್ಕೆ ಸರಿಯಾಗಿ ಕೆಲಸ ಮಾಡೋದಾದ್ರೆ ಇಲ್ಲಿರಿ, ಇಲ್ಲಾಂದ್ರೆ ಬೇರೆಯವರು ಕೆಲಸ ಮಾಡ್ತಾರೆ ಎಂದಿದ್ದೆ . ಅಲ್ಲದೇ  ಅವರ ಬದಲಿಗೆ ಬೇರೆ ಸಿಬ್ಬಂದಿ ನೀಡುವಂತೆ ಹೊರಗುತ್ತಿಗೆ ಏಜನ್ಸಿಗೂ ತಿಳಿಸಿದ್ದೆ. ಇದರಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಮತ್ತು ತನ್ನ ಮೇಲೆ ಹಗೆತನದಿಂದ ಈ ರೀತಿ ದೂರು ಕೊಟ್ಟಿದ್ದಾರೆ.ಈಗಾಗಲೇ ತನಿಖಾಧಿಕಾರಿ ಮುಂದೆ ಹಾಜರಾಗಿ ವಿವರವಾದ ಮಾಹಿತಿ ನೀಡಿದ್ದೇನೆ. ದೂರುದಾರ ಸಿಬ್ಬಂದಿಗೂ ತಪ್ಪು ಅರಿವಾಗಿದ್ದು ಕೂಡ ಈ ರೀತಿ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಈಗ ಕಚೇರಿ ಕೆಲಸಕ್ಕೆ ಬರುತ್ತಿದ್ದು ಎಲ್ಲ ವಿಚಾರಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ.

- Advertisement -

Latest News

error: Content is protected !!