Friday, May 3, 2024
Homeಕರಾವಳಿಸುಳ್ಯ; 210 ರೂ. ಪೆಟ್ರೋಲ್ ಹಾಕಿಸಿ 10 ರೂ. ಗೂಗಲ್ ಪೇ ಹಾಕಿ ಎಸ್ಕೇಪ್ ಆದ...

ಸುಳ್ಯ; 210 ರೂ. ಪೆಟ್ರೋಲ್ ಹಾಕಿಸಿ 10 ರೂ. ಗೂಗಲ್ ಪೇ ಹಾಕಿ ಎಸ್ಕೇಪ್ ಆದ ಖತರ್ನಾಕ್ ಕಿಲಾಡಿ

spot_img
- Advertisement -
- Advertisement -

ಸುಳ್ಯ; ಖತರ್ನಾಕ್ ಕಿಲಾಡಿ ಬೈಕ್ ಸವಾರನೊಬ್ಬ ಬೈಕ್ ಗೆ 210 ರೂ. ಪೆಟ್ರೋಲ್ ಹಾಕಿಸಿ 10 ರೂ. ಗೂಗಲ್ ಪೇ ಹಾಕಿ ಎಸ್ಕೇಪ್ ಆದ ಘಟನೆ ಸುಳ್ಯ ಜಾಲ್ಸೂರಿನಲ್ಲಿ ನಡೆದಿದೆ.

ಜಾಲ್ಸೂರಿನ ಪೆಟ್ರೋಲ್ ಬಂಕ್ ನಲ್ಲಿ ಜನವರಿ 5 ರಂದು ರಾತ್ರಿ ಈ ಘಟನೆ ಸಂಭವಿಸಿದೆ. ಬೈಕಿಗೆ ಪೆಟ್ರೋಲ್ ಹಾಕಲು ಬಂದ ವ್ಯಕ್ತಿಯೊಬ್ಬ ಪಂಪ್ ಸಿಬ್ಬಂದಿಯಲ್ಲಿ 210 ರೂ. ಪೆಟ್ರೋಲ್ ಹಾಕಲು ಹೇಳಿದ್ದಾನೆ. ಪಂಪ್ ಸಿಬ್ಬಂದಿ 210 ರೂಪಾಯಿಯ ಪೆಟ್ರೋಲ್ ಹಾಕಿದಾಗ ಆ ವ್ಯಕ್ತಿ ತಾನು ಹಣವನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದಾನೆ. ಆಗ ಪಂಪ್ ಸಿಬ್ಬಂದಿ ಸ್ಕ್ಯಾನರ್ ತೋರಿಸಿದ್ದಾರೆ. ಆ ವ್ಯಕ್ತಿ ಬರೇ 10 ರೂ. ಪೇ.ಮಾಡಿದ್ದು, ಆ ವ್ಯಕ್ತಿ ಹಣ ವರ್ಗಾವಣೆ ಮಾಡಿದ್ದು ಸಕ್ಸಸ್ ಎಂದು ಬಂದದ್ದನ್ನು ತನ್ನ ಮೊಬೈಲ್ ನಲ್ಲಿ ಪಂಪ್ ಸಿಬ್ಬಂದಿಗೆ ತೋರಿಸಿದ್ದು ಹಣ ಬಂದಿರಬಹುದೆಂದು ಪಂಪ್ ಸಿಬ್ಬಂದಿ ಭಾವಿಸಿದ್ದಾರೆ. ಆದ್ರೆ ಪರಿಶೀಲಿಸಿದಾಗ ಕೇವಲ 10 ರೂ. ಮಾತ್ರ ಬಂದಿದ್ದು ತಾನು ಮೋಸ ಹೋಗಿದ್ದು ಗೊತ್ತಾಗಿದೆ.

- Advertisement -
spot_img

Latest News

error: Content is protected !!