Friday, June 5, 2026
Homeಅಪರಾಧತೋಟದ ಮನೆಯಲ್ಲಿ ಮನುಷ್ಯನ ಬುರುಡೆಗಳು ಪತ್ತೆ; ವ್ಯಕ್ತಿ ಪೊಲೀಸ್ ವಶಕ್ಕೆ

ತೋಟದ ಮನೆಯಲ್ಲಿ ಮನುಷ್ಯನ ಬುರುಡೆಗಳು ಪತ್ತೆ; ವ್ಯಕ್ತಿ ಪೊಲೀಸ್ ವಶಕ್ಕೆ

- Advertisement -
- Advertisement -

ರಾಮನಗರ: ಬಿಡದಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ವ್ಯಕ್ತಿಯೋರ್ವ 20ಕ್ಕೂ ಹೆಚ್ಚು ಮನುಷ್ಯನ ಬುರುಡೆಗಳನ್ನು ಸಂಗ್ರಹಿಸಿ ಪೂಜೆ ಮಾಡುತ್ತಿದ್ದ ಘಟನೆ ಸೋಮವಾರ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಲರಾಮ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಈತ ಮನುಷ್ಯನ ಬುರುಡೆಗಳನ್ನು ಸಂಗ್ರಹಿಸಿ ಮಾಟ-ಮಂತ್ರ ಮಾಡುವ ಜೊತೆಗೆ, ರಾತ್ರಿ ಸ್ಮಶಾನದಲ್ಲಿ ಬುರುಡೆ ಪೂಜೆ ಮಾಡುತ್ತಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದರು.

ಗ್ರಾಮಸ್ಥರ ದೂರಿನ ಮೇರೆಗೆ ತೋಟದ ಮನೆಗೆ ಭೇಟಿ ನೀಡಿದಾಗ, ಬುರುಡೆಗಳು ಹಾಗೂ ಮೂಳೆಗಳು ಪತ್ತೆಯಾಗಿವೆ. ಭದ್ರಕಾಳಿ ಫೋಟೊ, ಹೋಮಕುಂಡದ ಸುತ್ತ ಬುರುಡೆಗಳನ್ನು ಜೋಡಿಸಿ ಪೂಜೆ ಮಾಡಲಾಗಿದೆ. ಬಲರಾಮ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಈತ ಕೆಲ ವರ್ಷಗಳಿಂದ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮನೆಗೆ ಭೇಟಿ ನೀಡಿದಾಗ ಕಂಡುಬಂದ ಬುರುಡೆಗಳು ಮತ್ತು ಮೂಳೆಗಳ ವಿಡಿಯೊ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿವೆ.

- Advertisement -

Latest News

error: Content is protected !!