Friday, June 5, 2026
Homeಕರಾವಳಿಉಡುಪಿಮಾವಿನ ಮರದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ; ದೂರು ದಾಖಲು

ಮಾವಿನ ಮರದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವ ಪತ್ತೆ; ದೂರು ದಾಖಲು

- Advertisement -
- Advertisement -

ಉಡುಪಿ: ಇಲ್ಲಿನ ಪುತ್ತೂರು ಗ್ರಾಮದ ಸಂತೆಕಟ್ಟೆ ನಿವಾಸಿಯೊಬ್ಬರ ಜಾಗದಲ್ಲಿ ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿರುವ ಮಾವಿನ ಮರದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ನೇಣು ಬಿಗಿದುಕೊಂಡು ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.

ಜಾಗದ ಮಾಲೀಕ ಜಾನ್‌ ಫರ್ನಾಂಡಿಸ್‌ ಅವರು ತಮ್ಮ ಜಾಗವನ್ನು ಸ್ವಚ್ಛ ಮಾಡಲು ಹೋದ ಸಂದರ್ಭದಲ್ಲಿ ಸುಮಾರು 40-45 ವರ್ಷದ ಪ್ರಾಯದ ಅಪರಿಚಿತ ಎರಡು ತಿಂಗಳ ಹಿಂದೆ ಕೇಬಲ್‌ ವೈಯರಿನ ಒಂದು ತುದಿಯನ್ನು ಮಾವಿನ ಮರದ ಕೊಂಬೆಗೆ ಬಿಗಿದು ಮತ್ತೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಈ ಬಗ್ಗೆ ಜಾನ್‌ ಫರ್ನಾಂಡಿಸ್‌ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಘಟನೆಯ ಬಗ್ಗೆ ಉಡುಪಿ ಪೊಲೀಸ್‌ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 194ರ ಅಡಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!