- Advertisement -
- Advertisement -
ಮಣಿಪಾಲ: ಅಮೆರಿಕದ ಪ್ರತಿಷ್ಠಿತ ಗೂಗಲ್ ಕ್ಲೌಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ಮಣಿಪಾಲ ಪೈ ಕುಟುಂಬದ ಸದಸ್ಯ ರಾಜ್ ಪೈ (ರಜನೇಶ್ ಪೈ) ಅವರು ನೇಮಕಗೊಂಡಿದ್ದಾರೆ.
ಕ್ಲೌಡ್ ಕೃತಕ ಬುದ್ಧಿಮತ್ತೆ (ಎಐ) ತಂಡದ ನಿರ್ವಹಣೆಯನ್ನು ರಾಜ್ ಪೈ ಅವರು ನೋಡಿಕೊಳ್ಳುವರು. ಗೂಗಲ್ ಸಂಸ್ಥೆ ಕ್ಲೌಡ್ ವ್ಯವಹಾರಕ್ಕೆ ಪ್ರಾಶಸ್ತ್ಯ ನೀಡ ಬಯಸಿರುವುದು ಈ ನೇಮಕಾತಿಯ ಸಂಕೇತವಾಗಿದೆ.
ರಾಜ್ ಪೈಯವರು ಅಮೆಜಾನ್, ಸಿಯಾಟಲ್‌ನಿಂದ ಈ ಹುದ್ದೆಗೆ ಬಂದಿದ್ದಾರೆ. ಅವರು ಅಮೆಜಾನ್ ಎಡಬ್ಲ್ಯುಎಸ್ ಉಪಾಧ್ಯಕ್ಷರಾಗಿದ್ದರು. ಅಮೆಜಾನ್ ಸಂಸ್ಥೆಯಲ್ಲಿ ಆರಂಭದಲ್ಲಿ ನಿರ್ದೇಶಕರಾಗಿ (ಉತ್ಪಾದನ ನಿರ್ವಹಣೆ, ಅಮೆಜಾನ್ ಎಲಾಸ್ಟಿಕ್ ಕಂಪ್ಯೂಟ್ ಕ್ಲೌಡ್- ಇಸಿ 2) ಸೇವೆ ಸಲ್ಲಿಸಿದ್ದರು.
- Advertisement -