Thursday, June 25, 2026
HomeಅಪರಾಧOnline ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ; ವಿಚಿತ್ರ ಐಸ್‌ಕ್ರೀಮ್ ಕಂಡು ಆಘಾತಕ್ಕೆ...

Online ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ; ವಿಚಿತ್ರ ಐಸ್‌ಕ್ರೀಮ್ ಕಂಡು ಆಘಾತಕ್ಕೆ ಒಳಗಾದ ಮಹಿಳೆ

- Advertisement -
- Advertisement -

ಮುಂಬಯಿ: ಆನ್ ಲೈನ್ ನಲ್ಲಿ ಮಹಿಳೆಯೊಬ್ಬರು ಐಸ್‌ಕ್ರೀಮ್ ಆರ್ಡರ್ ಮಾಡಿದ್ದು, ಈ ಐಸ್‌ಕ್ರೀಮ್ ನಲ್ಲಿ ಮಾನವನ ಬೆರಳೊಂದು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಿಂದ ವರದಿಯಾಗಿದೆ.

ಮಲಾಡ್‌ನ ಉಪನಗರದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಕೋನ್ ಐಸ್‌ಕ್ರೀಮ್ ಅನ್ನು ಆರ್ಡರ್ ಮಾಡಿದ್ದು, ಬಾಕ್ಸ್ ತೆರೆದು ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಐಸ್ ಕ್ರೀಮ್ ನಲ್ಲಿ ಏನೋ ವಿಚಿತ್ರ ವಸ್ತುವೊಂದು ಗೋಚರಿಸಿದೆ. ಮಹಿಳೆಯು ಅದೇನೆಂದು ನೋಡಿದ ಬಳಿಕ ಆಘಾತಕ್ಕೆ ಒಳಗಾಗಿದ್ದಾರೆ. ಕಾರಣ ಐಸ್ ಕ್ರೀಮ್ ನಲ್ಲಿ ಪತ್ತೆಯಾಗಿರುವುದು ಮಾನವನ ಬೆರಳು ಇದನ್ನು ಕಂಡ ಮಹಿಳೆ ಬೆಚ್ಚಿಬಿದ್ದಿದ್ದಾರೆ.

ಅಲ್ಲದೆ ತನ್ನ ಮೊಬೈಲ್ ನಲ್ಲಿ ಇದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಳಿಕ ಐಸ್ ಕ್ರೀಮ್ ಹಿಡಿದುಕೊಂಡು ಮಲಾಡ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಮಹಿಳೆಯ ದೂರು ಆಧರಿಸಿ ಮಲಾಡ್ ಪೊಲೀಸರು ಮುಂಬೈ ಯಮ್ಮೋ ಐಸ್ ಕ್ರೀಮ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!