Saturday, June 6, 2026
Homeಕರಾವಳಿಬಂಟ್ವಾಳ; ಮಸೀದಿಯಲ್ಲಿ ಹೃದಯಾಘಾತವಾಗಿ ಮಾಣಿ ಅಶ್ರಫ್  ಕರಾವಳಿ ನಿಧನ

ಬಂಟ್ವಾಳ; ಮಸೀದಿಯಲ್ಲಿ ಹೃದಯಾಘಾತವಾಗಿ ಮಾಣಿ ಅಶ್ರಫ್  ಕರಾವಳಿ ನಿಧನ

- Advertisement -
- Advertisement -

ಬಂಟ್ವಾಳ; ಮಸೀದಿಯಲ್ಲಿ ಹೃದಯಾಘಾತವಾಗಿ ಮಾಣಿ ಅಶ್ರಫ್ (52)  ಕರಾವಳಿ ನಿಧನವಾಗಿರುವ ಘಟನೆ ಗಡಿಯಾರ ಮಸೀದಿಯಲ್ಲಿ ನಡೆದಿದೆ.

ಬಂಟ್ವಾಳ ಮಾಣಿ ಸಮೀಪದ ಬುಡೋಳಿ ನಿವಾಸಿಯಾಗಿರುವ ಅಶ್ರಫ್ ಕರಾವಳಿ  ಎಂದಿನಂತೆ ಶುಕ್ರವಾರದ ನಮಾಝಿಗೆ ಗಡಿಯಾರ ಮಸೀದಿಗೆ ತೆರಳಿದ್ದರು. ನಮಾಝ್ ಮುಗಿಸಿ ಮಸೀದಿಯಲ್ಲಿ ಕುಳಿತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಶ್ರಫ್ ಅವರು ಬುಡೋಳಿ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾಗಿದ್ದು ಗಡಿಯಾರ ಜುಮಾ ಮಸೀದಿ, ಕಲ್ಲಡ್ಕ ರೇಂಜ್ ಮದ್ರಸ ಮೆನೇಜ್  ಮೆಂಟ್ ಇದರ ಕಾರ್ಯದರ್ಶಿಯಾಗಿ ಹಾಗೂ ಇನ್ನಿತರ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ತಂದೆ ಸಹಿತ 7 ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!