Monday, July 27, 2026
Homeಕರಾವಳಿಮಂಗಳೂರುಮಂಗಳೂರು: ಎಪಿಎಂಸಿ ಕಾರ್ಯದರ್ಶಿಯಿಂದ ಮಹಿಳಾ ಸಿಬ್ಬಂದಿ ಲೈಂಗಿಕ ಕಿರುಕುಳ: ಹಸಿರು ಸೀರೆ ಧರಿಸಿ ಅಧಿಕಾರಿಯನ್ನು ತರಾಟೆಗೆ...

ಮಂಗಳೂರು: ಎಪಿಎಂಸಿ ಕಾರ್ಯದರ್ಶಿಯಿಂದ ಮಹಿಳಾ ಸಿಬ್ಬಂದಿ ಲೈಂಗಿಕ ಕಿರುಕುಳ: ಹಸಿರು ಸೀರೆ ಧರಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಮಹಿಳೆಯರು

- Advertisement -
- Advertisement -

ಮಂಗಳೂರು: ಬೈಕಂಪಾಡಿ ಎಪಿಎಂಸಿ ಕಚೇರಿಯ ಮಹಿಳಾ ಗುತ್ತಿಗೆ ಸಿಬ್ಬಂದಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಪಿಎಂಸಿ ಕಾರ್ಯದರ್ಶಿ ಸಿ.ಎಚ್. ಮೋಹನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎಪಿಎಂಸಿಯಲ್ಲಿ ಗ್ರೂಪ್ ‘ಡಿ’ ನೌಕರೆಯಾಗಿ ಕೆಲಸ ಮಾಡುತ್ತಿರುವ ಇಬ್ಬರು ಮಕ್ಕಳ ತಾಯಿಗೆ, ಲೈಂಗಿಕ ಬೇಡಿಕೆಗೆ ಒಪ್ಪಿದರೆ ವೇತನವನ್ನು ₹15,000 ದಿಂದ ₹25,000ಕ್ಕೆ ಏರಿಸುವುದಾಗಿ ಮೋಹನ್ ಆಮಿಷ ಒಡ್ಡಿದ್ದರು ಎನ್ನಲಾಗಿದೆ.  ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಶೌಚಾಲಯ ಸ್ವಚ್ಛಗೊಳಿಸುವ ಕೆಲಸಕ್ಕೆ ನಿಯೋಜಿಸಿದ್ದರು. ಅಷ್ಟೇ ಅಲ್ಲದೆ, “ತನ್ನ ಬೇಡಿಕೆಗೆ ಸಮ್ಮತಿಯಿದ್ದರೆ ಸೋಮವಾರ ಹಸಿರು ಸೀರೆ ಉಟ್ಟು ಬರಬೇಕು” ಎಂದು ಷರತ್ತು ವಿಧಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದಲ್ಲಿ ಮಹಿಳೆಯರ ತಂಡ, ಹಸಿರು ಸೀರೆ ಧರಿಸಿ ‘ಗ್ರೀನ್ ಗ್ಯಾಂಗ್’ ಆಗಿ ಎಪಿಎಂಸಿ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಆರೋಪಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಪಣಂಬೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತೆಗೆ ಕೆಲಸದಲ್ಲಿ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!