Wednesday, May 15, 2024
Homeತಾಜಾ ಸುದ್ದಿಮಂಗಳೂರು ವಿವಿ ಪಿಹೆಚ್‌ಡಿ ಅವಧಿ ನಿಯಮ ಬಿಗಿ: ಅವಧಿ ಮೀರಿದರೇ ಅನುಮತಿಯೇ ರದ್ದು

ಮಂಗಳೂರು ವಿವಿ ಪಿಹೆಚ್‌ಡಿ ಅವಧಿ ನಿಯಮ ಬಿಗಿ: ಅವಧಿ ಮೀರಿದರೇ ಅನುಮತಿಯೇ ರದ್ದು

spot_img
- Advertisement -
- Advertisement -

ಮಂಗಳೂರು: ಪಿಎಚ್‌ಡಿ ಪೂರ್ಣಗೊಳಿಸಲು ಎಷ್ಟು ಸಮಯ ನೀಡಲಾಗಿದೆಯೋ ಆ ಸಮಯದೊಳಗೆ ಮಂಡನೆ ಮಾಡಬೇಕು; ಇಲ್ಲದಿದ್ದರೆ ಅಂತಹ ಸಂಶೋಧನಾ ವಿದ್ಯಾರ್ಥಿಯ ಪಿಎಚ್‌ಡಿ ಅನುಮತಿಯೇ ರದ್ದುಗೊಳ್ಳುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯ ಜಾರಿಗೊಳಿಸಿರುವ ಪಿಎಚ್‌ಡಿ ಹೊಸ ನೀತಿಯನ್ವಯ “ಅವಧಿ ಪಾಲನೆ’ ಇನ್ನು ಮುಂದೆ ಕಡ್ಡಾಯವಾಗಿರುತ್ತದೆ.

ಈ ಹಿಂದೆ ಸಂಶೋಧನಾ ವಿದ್ಯಾರ್ಥಿ 10 ವರ್ಷ ಕಳೆದು ಪಿಎಚ್‌ಡಿ ಮಂಡನೆ ಮಾಡದಿದ್ದರೂ, ವಿ.ವಿ., ಕುಲಪತಿ, ಮಾರ್ಗ ದರ್ಶಕರು ಅನುಮತಿ ನೀಡಿದರೆ ಪಿಎಚ್‌ಡಿ ಸಂಶೋಧನೆ ಮುಂದುವರಿಸಲು ಅವಕಾಶ ಸಿಗುತ್ತಿತ್ತು. ಆದರೆ, ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ. ಹೊಸ ನೀತಿಯ ಪ್ರಕಾರ, ಪೂರ್ಣಕಾಲಿಕ ಸಂಶೋಧನಾರ್ಥಿ 3 ವರ್ಷ ಹಾಗೂ 2 ವರ್ಷದ ಅವಧಿ ವಿಸ್ತರಣೆ ಸೇರಿ ಒಟ್ಟು 5 ವರ್ಷವನ್ನು ಮಾತ್ರ ಬಳಸಬಹುದು. ಅರೆಕಾಲಿಕ ಸಂಶೋಧನಾರ್ಥಿ ಒಟ್ಟು 6 ವರ್ಷವನ್ನು ಬಳಸಿಕೊಳ್ಳಲು ಮತ್ತು ಕೇವಲ ವಿಶೇಷ ಸಂದರ್ಭದಲ್ಲಿ ಮಾತ್ರ 1 ವರ್ಷದ ಅವಧಿ ವಿಸ್ತರಣೆ ಅನ್ವಯವಾಗುತ್ತದೆ. ಆದರೆ, ವಿಶೇಷ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಮಾತ್ರ 2 ವರ್ಷ ಅಧಿಕ ಅವಧಿ ವಿಸ್ತರಣೆ ಅನುಕೂಲ ಒದಗಿಸಲಾಗಿದೆ.

- Advertisement -
spot_img

Latest News

error: Content is protected !!