Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೇಧಿಸಿದ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ...

ಮಂಗಳೂರು: ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೇಧಿಸಿದ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು

- Advertisement -
- Advertisement -

ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೈಬರ್ ವಂಚಕರ ಜಾಲವನ್ನು ಬೇಧಿಸಿ  6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಶೇಖ್ ಕರೀಮುಲ್ಲಾ @ ರಸೂಲ್ (27), ಬುಡಿದಿನ್ನೆ ವಂಶಿ @ ಗುರು (21), ಪಂಡಿತಿ ಕ್ರಾಂತಿ ಕುಮಾರ್ (36), ಬಡೆ ಶ್ರೀನಿವಾಸ್ (38), ಉತ್ಸಲ ಸಂತೋಷ್ ಕೃಷ್ಣ (35) ಬಂಧಿತರು.  ಇನ್ನು ವಂಚಕರಿಗೆ ಬ್ಯಾಂಕ್ ಖಾತೆ ನೀಡಿದ ಆರೋಪದ ಮೇಲೆ ಮಂಗಳೂರಿನ ಇಬ್ರಾಹಿಂ (35) ನ್ನು ಅರೆಸ್ಟ್ ಮಾಡಲಾಗಿದೆ.

ಪ್ರಕರಣದ ವಿವರ:
ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ಕರೆಂಟ್ ಖಾತೆಯನ್ನು ವ್ಯವಹಾರ ಉದ್ದೇಶಕ್ಕಾಗಿ ನೀಡುವಂತೆ ಅವರ ಸ್ನೇಹಿತ ಇಬ್ರಾಹಿಂ ಕೇಳಿಕೊಂಡಿದ್ದನು. ಇಕ್ಬಾಲ್ ತಮ್ಮ ಬ್ಯಾಂಕ್ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್‌ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್ ಅನ್ನು ಇಬ್ರಾಹಿಂಗೆ ನೀಡಿದ್ದರು. ಬಳಿಕ ಆ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ ಇಕ್ಬಾಲ್ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ನಡೆಸಿದಾಗ, ವಂಚನಾ ಜಾಲವು ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಮಂಗಳೂರು ಪೊಲೀಸರ ವಿಶೇಷ ತಂಡ ಹೈದರಾಬಾದ್‌ಗೆ ತೆರಳಿ 5 ಮಂದಿಯನ್ನು ಅಲ್ಲಿ ಬಂಧಿಸಿದ್ದು, ಮತ್ತೋರ್ವ ಆರೋಪಿಯನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದಿದೆ.
ಪೊಲೀಸರು ಆರೋಪಿತರಿಂದ 18 ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, 12 ಸಿಮ್ ಕಾರ್ಡ್‌ಗಳು, 15 ಚೆಕ್‌ಬುಕ್‌ಗಳು, 12 ಬ್ಯಾಂಕ್ ಪಾಸ್‌ಬುಕ್‌ಗಳು ಹಾಗೂ 18 ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಸಾಮಾಜಿಕ ಜಾಲತಾಣಗಳ ಮೂಲಕ 4 ರಿಂದ 6 ಶೇಕಡಾ ಕಮೀಷನ್ ನೀಡುವುದಾಗಿ ಜಾಹೀರಾತು ನೀಡಿ, ಲಾಭದ ಆಸೆಗೆ ಒಳಗಾದ ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳು ಮತ್ತು ಓಟಿಪಿ ಪಡೆದು, ವಿದೇಶದಲ್ಲಿದ್ದ ಸೈಬರ್ ವಂಚಕರಿಗೆ ರವಾನಿಸುತ್ತಿದ್ದರು. ನಂತರ ಆ ಖಾತೆಗಳ ಮೂಲಕ ಹಣಕಾಸು ವಂಚನೆ ಮಾಡುತ್ತಿದ್ದರು.

ತನಿಖೆಯ ವೇಳೆ ಒಟ್ಟು 72 ಬ್ಯಾಂಕ್ ಖಾತೆಗಳ ವಿವರಗಳು ಪತ್ತೆಯಾಗಿದ್ದು, ಅವುಗಳಲ್ಲಿ 30 ಖಾತೆಗಳ ಮೇಲೆ NCRP ಪೋರ್ಟಲ್‌ನಲ್ಲಿ 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡುಬಂದಿದೆ. 26-02-2026 ರಂದು ಒಂದೇ ದಿನ 2 ಕೋಟಿಗೂ ಅಧಿಕ ಹಣಕಾಸು ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದ ಇತರೆ ಹಣಕಾಸು ವ್ಯವಹಾರಗಳ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!