Thursday, June 4, 2026
Homeಕರಾವಳಿಮಂಗಳೂರು: ಉದ್ಯಮಿ ಹಾಜಿ ಬಿ. ಮುಹಮ್ಮದ್ ಕುಂಞಿ ನಿಧನ

ಮಂಗಳೂರು: ಉದ್ಯಮಿ ಹಾಜಿ ಬಿ. ಮುಹಮ್ಮದ್ ಕುಂಞಿ ನಿಧನ

- Advertisement -
- Advertisement -

ಮಂಗಳೂರು: ನಗರದ ಹೆಸರಾಂತ ಉದ್ಯಮಿ, ಅತ್ತಾವರ ಕಾಪ್ರಿಗುಡ್ಡ ನಿವಾಸಿ ಹಾಜಿ ಬಿ. ಮುಹಮ್ಮದ್ ಕುಂಞಿ (84) ಇಂದು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ನಗರದ ರಹ್ಮಾನ್ ಸಾ ಮಿಲ್‌ನ ಮಾಲಕರಾಗಿದ್ದ ಇವರು ಟಿಂಬರ್ ವ್ಯಾಪಾರದ ಮೂಲಕ ಹೆಸರಾಂತ ಉದ್ಯಮಿಯಾಗಿ ಮಂಗಳೂರಿನಾದ್ಯಂತ ಗುರುತಿಸಲ್ಪಟ್ಟಿದ್ದರು. ನಗರದ ಹಂಪನಕಟ್ಟೆಯ ಮಸ್ಜಿದುನ್ನೂರ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

- Advertisement -

Latest News

error: Content is protected !!