Thursday, June 4, 2026
Homeಕರಾವಳಿವೆನ್ಲಾಕ್ ಆಸ್ಪತ್ರೆಗೆ ಅಂತಾರಾಷ್ಟ್ರೀಯ ದರ್ಜೆಯ 37 ಐಸಿಯು ಬೆಡ್‌ ಹಸ್ತಾಂತರ

ವೆನ್ಲಾಕ್ ಆಸ್ಪತ್ರೆಗೆ ಅಂತಾರಾಷ್ಟ್ರೀಯ ದರ್ಜೆಯ 37 ಐಸಿಯು ಬೆಡ್‌ ಹಸ್ತಾಂತರ

- Advertisement -
- Advertisement -

ಮಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ನಗರದ ವೆನ್ಲಾಕ್‌‌ ಜಿಲ್ಲಾಸ್ಪತ್ರೆಗೆ ಅಂತಾರಾಷ್ಟ್ರೀಯ ದರ್ಜೆಯ ಮತ್ತು ಅತ್ಯಾಧುನಿಕ ರೀತಿಯ 37 ಐಸಿಯು ಬೆಡ್‌ಗಳನ್ನು ಒದಗಿಸಲಾಗಿದೆ.

ವೆನ್ಲಾಕ್‌ ಹೊಸ ಕಟ್ಟಡದಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ವತಿಯಿಂದ ಅವುಗಳನ್ನು ಅಳವಡಿಸಲಾಗಿದೆ. ಅವಶ್ಯ ಬಿದ್ದರೆ ಕೋವಿಡ್ ಸೋಂಕಿತರ ಉಪಯೋಗಕ್ಕೆ ಅವುಗಳನ್ನು ಬಳಸಿಕೊಳ್ಳಲಾಗುವುದು. ಕೋವಿಡ್‌ ಚಿಕಿತ್ಸೆ ಪೂರ್ಣಗೊಂಡ ಬಳಿಕ ಇತರ ರೋಗಿಗಳಿಗೆ ಬಳಸಬಹುದಾಗಿದೆ.

ವೆನ್ಲಾಕ್‌ ‌ನಲ್ಲಿ ಸುಮಾರು 37 ಕೋಟಿ ರೂಪಾಯಿ ವೆಚ್ಚದ ನೂತನ ಪ್ರತ್ಯೇಕ ಸರ್ಜಿಕಲ್‌ ಬ್ಲಾಕ್‌ ಕೂಡ ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!