Saturday, June 6, 2026
Homeಕರಾವಳಿಕರ್ತವ್ಯದ ವೇಳೆಯಲ್ಲೇ ಬಾರ್ ನಲ್ಲಿ ಕೂತು ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ: ವಿಡಿಯೋ ವೈರಲ್

ಕರ್ತವ್ಯದ ವೇಳೆಯಲ್ಲೇ ಬಾರ್ ನಲ್ಲಿ ಕೂತು ಸಿಸಿಬಿ ಪೊಲೀಸರ ಎಣ್ಣೆ ಪಾರ್ಟಿ: ವಿಡಿಯೋ ವೈರಲ್

- Advertisement -
- Advertisement -

ಮಂಗಳೂರು: ಕರ್ತವ್ಯದ ಸಮಯದಲ್ಲಿ ನಗರದ ಹೊರವಲಯದ ಬಾರೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರ ತಂಡ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಯೋರ್ವನೊಂದಿಗೆ ಹಾಡುಹಗಲೇ ಎಣ್ಣೆ ಪಾರ್ಟಿ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಮಂಗಳೂರು ಹೊರವಲಯದ ಕುತ್ತಾರು ಸಾಗರ್ ಬಾರಲ್ಲಿ ಬುಧವಾರ ಮದ್ಯಾಹ್ನವೇ ಮಂಗಳೂರು ಸಿಸಿಬಿಯ ಎಂಟು ಮಂದಿ ಪೊಲೀಸರು ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಸಾಗರ್ ಬಾರಿನ ಹತ್ತಿರದ ಬಸ್ಸು ನಿಲ್ದಾಣದ ಬಳಿ ಸಿಸಿಬಿ ಪೊಲೀಸರು ತಮ್ಮ ಸರಕಾರಿ ಟಿ.ಟಿ ವಾಹನವನ್ನು ನಿಲ್ಲಿಸಿ ಬಾರೊಳಗೆ ಹೊಕ್ಕಿ ಎಣ್ಣೆ ಪಾರ್ಟಿಯಲ್ಲಿ ತೊಡಗಿದ್ದಾರೆ.

ಇದಲ್ಲದೆ, ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯ ಜೊತೆ ಎಂಟು ಮಂದಿ ಸಿಸಿಬಿ ಪೊಲೀಸರು ಬಾರಿನಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮದ್ಯಪಾನ ಪಾರ್ಟಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ಕಮಿಷನರ್ ಶಶಿಕುಮಾರ್ ತನಿಖೆಗೆ ಆದೇಶಿಸಿದ್ದಾರೆ. ಮಂಗಳೂರು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ರೌಡಿಗಳು,ಅಕ್ರಮಿಗಳ ಹೆಡೆ ಮುರಿ ಕಟ್ಟಬೇಕಾದ ಸಿಸಿಬಿ ಪೊಲೀಸರೆ ಅಕ್ರಮಿಗಳ ಜೊತೆ ಸೇರಿ ಈ ರೀತಿ ಎಣ್ಣೆ ಪಾರ್ಟಿ ಮಾಡೋದಾದರೆ ಜನಸಾಮಾನ್ಯರಿಗೆ ಇವರಿಂದ ನ್ಯಾಯ ಮರೀಚಿಕೆಯ ವಿಷಯವೇ ಆಗಿದೆ.

- Advertisement -

Latest News

error: Content is protected !!