Thursday, March 28, 2024
Homeತಾಜಾ ಸುದ್ದಿಪಾಕಿಸ್ತಾನದ ಇಮ್ರಾನ್ ಖಾನ್‌ಗೆ ಪಕ್ಷಕ್ಕೆ ಅಕ್ರಮ ದೇಣಿಗೆ ನೀಡಿದ ಮಂಗಳೂರು ಮೂಲದ ಮಹಿಳೆ: ಭಾರೀ ಸದ್ದು...

ಪಾಕಿಸ್ತಾನದ ಇಮ್ರಾನ್ ಖಾನ್‌ಗೆ ಪಕ್ಷಕ್ಕೆ ಅಕ್ರಮ ದೇಣಿಗೆ ನೀಡಿದ ಮಂಗಳೂರು ಮೂಲದ ಮಹಿಳೆ: ಭಾರೀ ಸದ್ದು ಮಾಡುತ್ತಿದೆ ರೋಮಿತಾ ಶೆಟ್ಟಿ ಹೆಸರು

spot_img
- Advertisement -
- Advertisement -

ನವದೆಹಲಿ: ಪಾಕಿಸ್ತಾನದಲ್ಲಿ ಅಧಿಕಾರ ಕಳೆದುಕೊಂಡ ಬಳಿಕವೂ ಇಮ್ರಾನ್ ಖಾನ್ ಪದೇ ಪದೇ ಸುದ್ದಿಯಲ್ಲಿರುತ್ತಾರೆ. ಇದೀಗ ಇಮ್ರಾನ್ ಖಾನ್ ಜೊತೆ ಮಂಗಳೂರು ಮೂಲದ ಮಹಿಳೆ ರೋಮಿತಾ ಶೆಟ್ಟಿ ಹೆಸರೂ ಜೋರು ಸದ್ದು ಮಾಡುತ್ತಿದೆ.

ಪಾಕಿಸ್ತಾನದ ಚುನಾವಣಾ ಆಯೋಗ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷಕ್ಕೆ ಸಂದಾಯದವಾದ ದೇಣಿಗೆಯ ವಿವರವನ್ನು ಮೂರು ದಿನಗಳ ಹಿಂದೆ ಬಿಡುಗಡೆ ಮಾಡಿದೆ. ಇದರಲ್ಲಿ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಕ್ಷಕ್ಕೆ ಅಕ್ರಮವಾಗಿ ಹಣ ಸಂದಾಯವಾಗಿರುವುದನ್ನು ದಾಖಲೆ ಸಮೇತ ಕೊಟ್ಟಿದೆ..

ಈ ಪೈಕಿ ಮಂಗಳೂರು ಮೂಲದ ಅಮೆರಿಕಾ ಉದ್ಯಮಿ ರೊಮಿತಾ ಶೆಟ್ಟಿ ಎಂಬುವರು ನೀಡಿದ 13,750 ಡಾಲರ್ ಹಣ ಇದೆ. ಅಂದರೆ ಪಾಕಿಸ್ತಾನ ಕರೆನ್ಸಿಯಲ್ಲಿ ೩೦.೮೫ ಲಕ್ಷ ರೂಪಾಯಿಯನ್ನೂ ಅಕ್ರಮ ದೇಣಿಗೆ ಎಂದು ಘೋಷಿಸಿದೆ. ರೊಮಿತಾ ಶೆಟ್ಟಿ ಅವರ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ನೆಟ್ಟಿಗರು ಸೋಶಿಯಲ್ ಮೀಡಿಯಾ ಹಾಗೂ ಗೂಗಲ್ ಸರ್ಚ್ ಪೇಜ್ ನಲ್ಲಿ ಅವರ ಬಗ್ಗೆ ಹುಟುಕಾಟ ನಡೆಸಿದ್ದಾರೆ.

ಯಾರು ರೊಮಿತಾ ಶೆಟ್ಟಿ?

ಮಂಗಳೂರು ಮೂಲದ ರೊಮಿತಾ ಶೆಟ್ಟಿ, ಪಾಕಿಸ್ತಾನ ಮೂಲದ ಅಮೆರಿಕನ್ ವ್ಯಕ್ತಿ, ಉದ್ಯಮಿ ನಜೀರ್ ಅಜೀಜ್ ಅಹ್ಮದ್ ಎಂಬುವರ ಪತ್ನಿಯಾಗಿದ್ದಾರೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಡಿಮಿಯಾವೊ ಅಹ್ಮದ್ ಕ್ಯಾಪಿಟಲ್ ಎಲ್ ಎಲ್ ಎಲ್(ಡಿಎ ಕ್ಯಾಪಿಟಲ್) ಎಂಬ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ. ಕೊಲಂಬಿಯಾ ವಿಶ್ವವಿದ್ಯಾಲಯದ ಗ್ಲೋಬಲ್ ಥಾಟ್ ವಿಭಾಗದ ಸಲಹೆಗಾರ್ತಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬ್ಲೂಮ್ ಬರ್ಗ್ ಹೇಳಿದೆ.

ಅರ್ಥಶಾಸ್ತ್ರದಲ್ಲಿ 27 ವರ್ಷಗಳ ವೃತ್ತಿ ಅನುಭವವನ್ನು ಹೊಂದಿದ್ದಾರೆ. ಭಾರತದ ರಾಜಧಾನಿ ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ತಮ್ಮ ಬಿಎ ಹಾನರ್ಸ್ ಪೂರ್ಣಗೊಳಿಸಿದರು. ನಂತರ, ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇಂಟರ್ನ್ಯಾಷನಲ್ ರಿಲೇಶನ್ಸ್ ಪದವಿಯಲ್ಲಿ ಎಂಎ ಪಡೆದಿದ್ದಾರೆ.

- Advertisement -
spot_img

Latest News

error: Content is protected !!