Friday, April 26, 2024
Homeಕರಾವಳಿಮಂಗಳೂರಿನ ಯುವತಿಯಿಂದ ವಿಶ್ವಸಂಸ್ಥೆಯ 'ಮಹಿಳಾ ವಿರೋಧಿ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ'ಯಲ್ಲಿ ಭಾಷಣ'

ಮಂಗಳೂರಿನ ಯುವತಿಯಿಂದ ವಿಶ್ವಸಂಸ್ಥೆಯ ‘ಮಹಿಳಾ ವಿರೋಧಿ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ’ಯಲ್ಲಿ ಭಾಷಣ’

spot_img
- Advertisement -
- Advertisement -

ಮಂಗಳೂರು: ನಗರದ ನಿವಾಸಿ ಪ್ರೀತಿ ಲೋಲಾಕ್ಷ ನಾಗವೇಣಿಯವರು ವಿಶ್ವಸಂಸ್ಥೆಯ ‘ಮಹಿಳಾ ವಿರೋಧಿ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ’ ನಡೆಸಿದ ಚರ್ಚೆಯಲ್ಲಿ ಮಹಿಳೆಯರ ಹಕ್ಕುಗಳ ಪರ ಭಾಷಣ ಮಂಡಿಸಿದ್ದಾರೆ.

ಇಂಗ್ಲೆಂಡ್​ನ ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ವಿಷಯದಲ್ಲಿ ಪಿಹೆಚ್​ಡಿ ಮಾಡುತ್ತಿರುವ ಪ್ರೀತಿಯವರು, ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿಯಾಗಿರುವ ಅಮಿತ್‌ ಆನಂದ್ ಜೊತೆ ಸೇರಿ ಭಾಷಣ ಸಿದ್ಧಪಡಿಸಿದ್ದರು.

ವಿಶ್ವಸಂಸ್ಥೆಯ ‘ಮಹಿಳಾ ವಿರೋಧಿ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ’ಯ 79ನೇ ಅಧಿವೇಶನದಲ್ಲಿ ‘ಮೂಲನಿವಾಸಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಹಕ್ಕುಗಳ ಕುರಿತ ಚರ್ಚೆಯಲ್ಲಿ ವಿಷಯ ಮಂಡಿಸಿದ್ದಾರೆ ಎಂದು ಅಧಿವೇಶನ ಸಂಘಟನೆ ಮಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ವೆಬ್​ಸೈಟ್​ ಪ್ರಕಟಿಸಿದೆ.
ಪ್ರೀತಿಯವರು ಮಂಗಳೂರಿನ ಮಾನವ ಹಕ್ಕುಗಳ ಕಾರ್ಯಕರ್ತ ಲೋಲಾಕ್ಷ ಹಾಗೂ ನಾಗವೇಣಿ ದಂಪತಿಯ ಪುತ್ರಿಯಾಗಿದ್ದಾರೆ.

- Advertisement -
spot_img

Latest News

error: Content is protected !!