Friday, June 5, 2026
Homeಕರಾವಳಿಮೀನುಗಾರರು ನಾಪತ್ತೆ ಪ್ರಕರಣ: ಮೀನುಗಾರಿಕಾ ಬಂದರು ಬಂದ್ ಮಾಡಿ ಮೀನುಗಾರರ ಪ್ರತಿಭಟನೆ

ಮೀನುಗಾರರು ನಾಪತ್ತೆ ಪ್ರಕರಣ: ಮೀನುಗಾರಿಕಾ ಬಂದರು ಬಂದ್ ಮಾಡಿ ಮೀನುಗಾರರ ಪ್ರತಿಭಟನೆ

- Advertisement -
- Advertisement -

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆಯಾಗಿ ನಾಪತ್ತೆಯಾದವರಲ್ಲಿ ಇನ್ನೂ ನಾಲ್ವರು ಪತ್ತೆಯಾಗದ ಹಿನ್ನಲೆಯಲ್ಲಿ ಮಂಗಳೂರು ಮೀನುಗಾರಿಕಾ ಬಂದರು ಸಂಪೂರ್ಣ ಬಂದ್ ಮಾಡಿ ಮೀನುರಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮೀನುಗಾರಿಕೆಗಾಗಿ ನಗರದ ಬಂದರಿನಿಂದ ತೆರಳಿದ್ದ ಪರ್ಸೀನ್‌ ಬೋಟ್‌ ಸೋಮವಾರ ರಾತ್ರಿ ಅರಬ್ಬೀ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ನಾಪತ್ತೆಯಾದ ಆರು ಮಂದಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಮುಂದುವರಿದಿದೆ. ಬೋಟ್‌ ನಲ್ಲಿ ಒಟ್ಟು 25 ಮಂದಿ ತೆರಳಿದ್ದು, 19 ಮಂದಿ ಪಾರಾಗಿದ್ದಾರೆ.

ನಾಪತ್ತೆಯಾದವರನ್ನು ಶೀಘ್ರವಾಗಿ ಪತ್ತೆ ಮಾಡಬೇಕು. ಉಳಿದ ನಾಲ್ವರು ಪತ್ತೆಯಾಗುವವರೆಗೆ ಮೀನು ವ್ಯವಹಾರ ಮಾಡುವುದಿಲ್ಲ ಎಂದು ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನು ನಿನ್ನೆ  ಮಧ್ಯಾಹ್ನ ಇಬ್ಬರ ಮೃತಹೇದ ಪತ್ತೆಯಾಗಿದೆ. ಸಮುದ್ರಪಾಲಾಗಿದ್ದ ಆರು ಮಂದಿಯಲ್ಲಿ ಬೊಕ್ಕಪಟ್ಣ ಬೆಂಗ್ರೆಯ ಪಾಂಡುರಂಗ ಸುವರ್ಣ (58) ಮತ್ತು ಪ್ರೀತಂ (25) ಅವರ ಮೃತದೇಹ ಪತ್ತೆಯಾಗಿದೆ.  ಬೊಕ್ಕಪಟ್ಣ ಬೆಂಗ್ರೆಯ ಚಿಂತನ್‌ (21), ಕಸ್ಬಾ ಬೆಂಗ್ರೆಯ ಹಸೈನಾರ್‌ (25), ಅನ್ಸಾರ್‌ (31) ಮತ್ತು ಜಿಯಾವುಲ್ಲಾ (32) ಅವರು ನಾಪತ್ತೆಯಾಗಿದ್ದಾರೆ.

- Advertisement -

Latest News

error: Content is protected !!