Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ಕಾವೂರಿನಲ್ಲಿ ಬೆಳಗ್ಗಿನ ಜಾವ ಬಾಗಿಲು ಮುರಿದು ಕಳ್ಳತನ

ಮಂಗಳೂರು; ಕಾವೂರಿನಲ್ಲಿ ಬೆಳಗ್ಗಿನ ಜಾವ ಬಾಗಿಲು ಮುರಿದು ಕಳ್ಳತನ

- Advertisement -
- Advertisement -

ಮಂಗಳೂರು; ಕಾವೂರಿನಲ್ಲಿ ಬೆಳಗ್ಗಿನ ಜಾವ ಬಾಗಿಲು ಮುರಿದು ಕಳ್ಳತನ ಯತ್ನಿಸಿದ್ದಾರೆ. ಮಹಾತ್ಮನಗರ ಬಡಾವಣೆಯಲ್ಲಿ ಭಾನುವಾರ ಬೆಳಗ್ಗಿನ ಜಾವ ಮನೆ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.

ಬೆಳಗ್ಗಿನ ಜಾವ ಸುಮಾರು 1.30 ಯಿಂದ 2.00 ಗಂಟೆ ಸುಮಾರಿಗೆ  ಬಂದ ನಾಲ್ವರ ತಂಡ  ಗೇಟಿನ ಬೀಗ  ಮುರಿದು ಮನೆಯ ಮುಂಬಾಗಿಲ ಬೀಗವನ್ನು ರಾಡಿನಿಂದ ಮುರಿಯಲು ಯತ್ನಿಸಿದ್ದಾರೆ. ಈ ಸಂದರ್ಭ ಮನೆ ಯಜಮಾನರಿಗೆ ಎಚ್ಚರಿಕೆಯಾಗಿ ಬೊಬ್ಬೆ ಹಾಕಿದಾಗ ಕಳ್ಳರು ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ.

- Advertisement -

Latest News

error: Content is protected !!