Monday, April 29, 2024
Homeತಾಜಾ ಸುದ್ದಿವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಮೆಗಾ ಪ್ರಾಜೆಕ್ಟ್‌ಗೆ ಮಂಗಳೂರು ಮೂಲದ ನಟಿಯೇ ನಾಯಕಿ

ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಮೆಗಾ ಪ್ರಾಜೆಕ್ಟ್‌ಗೆ ಮಂಗಳೂರು ಮೂಲದ ನಟಿಯೇ ನಾಯಕಿ

spot_img
- Advertisement -
- Advertisement -

ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ‘ಅರ್ಜುನ್ ರೆಡ್ಡಿ’ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಕಾಂಬಿನೇಶನ್‌ನ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ನಾಯಕಿ ಆಯ್ಕೆ ಆಗಿದೆ. ತುಳುನಾಡಿನ ಕುವರಿ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಲೀಡ್ ಆಗಿ ನಟಿಸುತ್ತಿದ್ದಾರೆ.

ಇದೊಂದು ಆಕ್ಷನ್ ಡ್ರಾಮಾ ಆಗಿದೆ. ಜೂನ್ ಮೊದಲ ವಾರದಲ್ಲಿಯೇ ಈ ಸಿನಿಮಾದ ಶೂಟಿಂಗ್‌ ಮುಂಬೈನಲ್ಲಿ ನಡೆಯಲಿದೆ. ಪೂಜಾ ಹೆಗ್ಡೆ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರಂತೆ. ಈಗಾಗಲೇ ಸಿನಿಮಾ ತಂಡ ಪ್ರಿ ಪ್ರೊಡಕ್ಷನ್ ಕೆಲಸ ಮಾಡಿಕೊಳ್ಳುತ್ತಿದೆ. ಈ ಸಿನಿಮಾವನ್ನು ಐದು ಭಾಷೆಯಲ್ಲಿ ರಿಲೀಸ್ ಮಾಡಲು ತಯಾರಿ ನಡೆಸಲಾಗುತ್ತಿದೆ. ಪೂಜಾ ಹೆಗ್ಡೆ ಅವರಿಗೆ ಒಂದಾದ ಮೇಲೆ ಒಂದು ಸೋಲು ಸಿಕ್ಕಿದೆ. ಹೀಗಾಗಿ ಈ ಚಿತ್ರದಲ್ಲಿಯಾದರೂ ಅವರು ಗೆಲುವು ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಪದೇ ಪದೇ ಸೋಲು ಸಿಕ್ಕಿದ್ದಕ್ಕೆ ಪೂಜಾ ಹೆಗ್ಡೆ ಅವರಿಗೆ ಐರನ್ ಲೆಗ್ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಭಾಸ್ ನಟನೆಯ ‘ರಾಧೆ ಶ್ಯಾಮ್’ ಮತ್ತು ‘ದಳಪತಿ’ ವಿಜಯ್ ನಟನೆಯ ‘ಬೀಸ್ಟ್‌’ ಸಿನಿಮಾಗಳಿಗೆ ನಾಯಕಿಯಾಗುವ ಅವಕಾಶ ನಟಿ ಪೂಜಾ ಹೆಗ್ಡೆಗೆ ಸಿಕ್ಕಿತ್ತು. ಆದರೆ ಈ ಚಿತ್ರಗಳು ಗೆಲ್ಲಲೇ ಇಲ್ಲ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ ನಟನೆಯ ‘ಆಚಾರ್ಯ’ ಚಿತ್ರದಲ್ಲಿಯೂ ಪೂಜಾ ನಟಿಸಿದ್ದರು.

JGM ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡಿದ್ದಾರೆ. ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ” ಎಂದು ಸಿನಿಮಾ ಬಗ್ಗೆ ವಿಜಯ್ ದೇವರಕೊಂಡ ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು. JGM ಸಿನಿಮಾ 2023ರ ಆಗಸ್ಟ್ 3ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆಯಂತೆ

- Advertisement -
spot_img

Latest News

error: Content is protected !!